-->
 ಮಂಗಳೂರು ಅಂತರ್ ವಿವಿ ಬ್ಯಾಡ್ಮಿಂಟನ್ ಪಂದ್ಯಾಟ: ಆಳ್ವಾಸ್‌ಗೆ ಎಂಟನೇ ಭಾರಿ ರೋಲಿಂಗ್ ಶೀಲ್ಡ್ ನ ಗೌರವ

ಮಂಗಳೂರು ಅಂತರ್ ವಿವಿ ಬ್ಯಾಡ್ಮಿಂಟನ್ ಪಂದ್ಯಾಟ: ಆಳ್ವಾಸ್‌ಗೆ ಎಂಟನೇ ಭಾರಿ ರೋಲಿಂಗ್ ಶೀಲ್ಡ್ ನ ಗೌರವ



ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿಯು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್‌ನಲ್ಲಿ ಜರುಗಿತು.  ಈ ಪಂದ್ಯಾವಳಿಯಲ್ಲಿ ಪುರುಷರ 32 ತಂಡ ಹಾಗೂ ಮಹಿಳೆಯರ 26 ತಂಡಗಳು ಭಾಗವಹಿಸಿದ್ದವು.  ಪುರುಷರ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಆಯ್ಕೆಯಾಗಿ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಸಂತ ಅಲೋಶಿಯಸ್ ತಂಡವನ್ನು 3-೦ ನೇರ ಸುತ್ತುಗಳಿಂದ ಸೋಲಿಸಿ ಕೆಮ್ಮಾರೆ ಬಾಲಕೃಷ್ಣ ಗೌಡ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಸಾಧನೆಯೊಂದಿಗೆ ಆಳ್ವಾಸ್ ಕಾಲೇಜು ರೋಲಿಂಗ್ ಶೀಲ್ಡ್ ನ್ನು ಎಂಟನೇ ಬಾರಿಗೆ ತನ್ನದಾಗಿಸಿಕೊಂಡಿತು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.  


Ads on article

Advertise in articles 1

advertising articles 2

Advertise under the article