ಮಕರ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗದಿಂದ ಲಕ್ಷ್ಮೀನಾರಾಯಣ ಯೋಗ..!!ಈ 3 ರಾಶಿಯವರಿಗೆ ಬಂಪರ್ ಲಾಭ!
Tuesday, December 13, 2022
ಧನು ರಾಶಿ:
ಮಕರ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಲಕ್ಷ್ಮೀನಾರಾಯಣ ರಾಜ ಯೋಗವು ಧನು ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಆರ್ಥಿಕ ಮೂಲಗಳು ಹೆಚ್ಚಾಗಲಿವೆ.
ಮಕರ ರಾಶಿ:
ಈ ರಾಶಿಯವರಿಗೆ ಬಲವಾದ ಪ್ರಯೋಜನಗಳು ದೊರೆಯಲಿವೆ. ಈ ರಾಶಿಯವರು ಈ ಸಮಯದಲ್ಲಿ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲವನ್ನು ಪಡೆಯುವುದರ ಜೊತೆಗೆ ಬಹಳಷ್ಟು ಸಂಪತ್ತನ್ನು ಸಹ ಗಳಿಸುತ್ತಾರೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಈ ಸಮಯದಲ್ಲಿ ಮತ್ತೆ ಚಾಲನೆ ದೊರೆಯಲಿದ್ದು ಆ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ.
ಮೀನ ರಾಶಿ:
ಮೀನ ರಾಶಿಯವರಿಗೆ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಂಪತ್ತಿನ ಹೊಳೆಯೇ ಹರಿಯಲಿದೆ. ಹಠಾತ್ ಧನ ಲಾಭದಿಂದಾಗಿ ನಿಮ್ಮ ಆದಾಯ ಹೆಚ್ಚಳವಾಗಲಿದೆ. ಈ ಸಮಯದಲ್ಲಿ ಉದ್ಯೋಗ, ವ್ಯವಹಾರಗಳಿಗೆ ಸಂಬಂಧಿಸಿದ ನಿಮ್ಮ ಬಹುದಿನಗಳ ಕನಸು ನನಸಾಗುವ ಸಾಧ್ಯತೆಯೂ ಇದೆ.