ಲಕ್ಷ್ಮಿ ದೇವರ ಕೃಪೆಯಿಂದ ಹೊಸ ವರ್ಷಕ್ಕೆ ಈ 4 ರಾಶಿಯವರಿಗೆ ಅದೃಷ್ಟವೂ ಅದೃಷ್ಟ...!!
Thursday, December 29, 2022
ಮೇಷ ರಾಶಿ : ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಆದಾಯದಲ್ಲಿ ಹೆಚ್ಚಳವಾಗಬಹುದು. ಆರ್ಥಿಕ ಪರಿಸ್ಥಿತಿಯ ಬಲವರ್ಧನೆಯಿಂದಾಗಿ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಮಿಥುನ ರಾಶಿ : ಲಕ್ಷ್ಮೀ ನಾರಾಯಣ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ವೃತ್ತಿ ಜೀವನದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಬಹುದು.
ತುಲಾ ರಾಶಿ : ಡಿಸೆಂಬರ್ 28 ರಂದು ಬುಧ ಸಂಕ್ರಮಣ ಮತ್ತು ಡಿಸೆಂಬರ್ 29 ರಂದು ಶುಕ್ರ ಸಂಕ್ರಮಣದಿಂದ ನಿರ್ಮಾಣವಾಗಿರುವ ಲಕ್ಷ್ಮೀ ನಾರಾಯಣ ರಾಜಯೋಗವು ತುಲಾ ರಾಶಿಯವರ ಪಾಲಿಗೆ ಉತ್ತಮ ದಿನಗಳನ್ನು ತರಲಿದೆ. ಇದುವರೆಗೆ ವೃತ್ತಿ ಜೀವನದಲ್ಲಿ ಎದುರಿಸುತ್ತಿದ್ದ ಸಂಕಷ್ಟಗಳು ಪರಿಹಾರವಾಗುವುದು.
ವೃಶ್ಚಿಕ ರಾಶಿ : ಒತ್ತಡದಿಂದ ಮುಕ್ತಿ ದೊರೆಯಲಿದೆ. ಸಂತೋಷ ಮತ್ತು ಶಾಂತಿಯಿಂದ ಜೀವನವನ್ನು ನಡೆಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಈ ಹಿಂದೆ ಬಾಧಿಸುತ್ತಿದ್ದ ರೋಗಗಳಿಂದ ಕೂಡಾ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.