ಚಂದ್ರಬಾಬು ರೋಡ್ ಶೋ ವೇಳೆ ಒಳಚರಂಡಿಗೆ ಬಿದ್ದು 8ಮಂದಿ ಮೃತ್ಯು
Thursday, December 29, 2022
ನೆಲ್ಲೂರು: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ರ್ಯಾಲಿ ನಡೆಯುತ್ತಿದ್ದ ಸಂದರ್ಭ ಒಳಚರಂಡಿ ಕಾಲುವೆಗೆ ಬಿದ್ದು ಓರ್ವ ಮಹಿಳೆ ಸೇರಿದಂತೆ 8 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮಾಜಿ ಸಿಎಂ ನಾಯ್ಡು ಚಂದ್ರಬಾಬು ಅವರ ಬೆಂಗಾವಲು ಪಡೆ ಸಂಜೆ ಈ ಪ್ರದೇಶವನ್ನು ಹಾದುಹೋಗುತ್ತಿದ್ದಂತೆ ಈ ಘಟನೆ ನಡೆದಿದೆ. ನಾಯ್ಡು ರೋಡ್ ಶೋ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲು ನಡೆದಿದೆ. ಆಗ ಕೆಲವರು ಆಯ ತಪ್ಪಿ ಒಳಚರಂಡಿ ಕಾಲುವೆಗೆ ಬಿದ್ದು ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಒಳಚರಂಡಿ ಕಾಲುವೆಗೆ ಬಿದ್ದವರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಸಭೆಯನ್ನು ರದ್ದುಪಡಿಸಿರುವ ಚಂದ್ರಬಾಬು ನಾಯ್ಡು ಅವರು, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.