ಆಳ್ವಾಸ್ನ ಒರ್ವನಿಗೆ ಏಕಲವ್ಯ, ಮೂವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ
ಮೂಡುಬಿದಿರೆ: ಕರ್ನಾಟಕ ಸರಕಾರದಿಂದ ಕೊಡಮಾಡುವ 2021ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಓರ್ವ ಕ್ರೀಡಾಪಟು ಚೇತನ್ ಹಾಗೂ 2021ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಮೂವರು ಕ್ರೀಡಾಪಟುಗಳಾದ ಕವನ, ವೀರಭದ್ರ ನಿಂಗಪ್ಪ ಮುಧೋಳ್ ಮತ್ತು ರಮೇಶ್ ಕ್ರಮವಾಗಿ ಬಾಲ್ ಬ್ಯಾಡ್ಮಿಂಟನ್, ಮಲ್ಲಕಂಬ ಹಾಗೂ ಖೋ ಖೋ ವಿಭಾಗದಲ್ಲಿ ಆಯ್ಕೆಯಾಗಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಸಾಧಕ ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ಕ್ರೀಡಾ ದತ್ತು ಸ್ವೀಕಾರದಡಿಯಲ್ಲಿ ಉಚಿತ ಶಿಕ್ಷಣ ಪಡೆದ ಪ್ರತಿಭಾವಂತರು. ಕ್ರೀಡಾಪಟುಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಕ್ರೀಡಾಪಟುಗಳ ಪ್ರಮುಖ ಸಾಧನೆಗಳು
• ಚೇತನ್
ಚೇತನ್ ಅಂತರಾಷ್ಟಿçÃಯ ಮಟ್ಟದ ಎತ್ತರ ಜಿಗಿತದ ಕ್ರೀಡಾಪಟು. 2016-22ರವರೆಗೆ ನಡೆದ ರಾಷ್ಟç ಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ. 2017ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 5ನೇ ಸ್ಥಾನ. 2018ರ ಏಷ್ಯನ್ ಗೇಮ್ಸ್ನಲ್ಲಿ 4ನೇ ಸ್ಥಾನ ಗಳಿಸಿದ್ದಾರೆ
• ಕವನ ಎಂ
ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ಕವನ ಮೂಲತಃ ಹಾಸನದವರಾಗಿದ್ದು, ಈವರೆಗೆ ಬಾಲ್ ಬ್ಯಾಡ್ಮಿಂಟನ್ ಸಾಧನೆಗೆ ಮೂರು ಬಾರಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದಿದ್ದಾರೆ. ಸೀನಿಯರ್ ನ್ಯಾಷನಲ್ ಬಾಲ್ ಬ್ಯಾಡ್ಮಿಂಟನ್ನಲ್ಲಿ 4 ಚಿನ್ನ ಹಾಗೂ 1 ಬೆಳ್ಳಿ, ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 4 ಚಿನ್ನ, ಫೆಡೆರೇಷನ್ ಕಪ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 2 ಚಿನ್ನ, ಇಂಟರ್ ಝೋನ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 2 ಚಿನ್ನ, ಸೌತ್ ಝೋನ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 2 ಚಿನ್ನದ ಪದಕ ಗಳಿಸಿದ್ದಾರೆ.
• ರಮೇಶ್
ಖೋ-ಖೋ ಕ್ರೀಡಾಪಟು ರಮೇಶ್ 5 ಬಾರಿ ಸೀನಿಯರ್ ನ್ಯಾಷನಲ್ ಖೋ-ಖೋ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾರೆ. ಇಂಟರ್ನ್ಯಾಷನಲ್ ಖೋ-ಖೋ ಟೆಸ್ಟ್ ಮ್ಯಾಚ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಫೆಡೆರೇಷನ್ ಕಪ್ನಲ್ಲಿ ಭಾಗವಹಿಸಿದ್ದಾರೆ.
• ವೀರಭದ್ರ ನಿಂಗಪ್ಪ ಮುಧೋಳ್
ದೇಶೀಯ ಕ್ರೀಡೆ ಮಲ್ಲಕಂಬದ ಕ್ರೀಡಾಪಟು. ಪ್ರಥಮ ವರ್ಲ್ಡ್ ಮಲ್ಲಕಂಬ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕ ರಾಜ್ಯದ ಏಕೈಕ ಕ್ರೀಡಾಪಟು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡ ಏಕೈಕ ತಂಡದ ಸದಸ್ಯ. ಅಖಿಲ ಭಾರತ ಅಂತರ್ ವಿವಿ ಮಲ್ಲಕಂಬ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಕ್ರೀಡಾಪಟು.