
ಸುಳ್ಯ: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಬಾಲಕಿ ಮೃತ್ಯು
Thursday, December 1, 2022
ಸುಳ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಸುಳ್ಯದಲ್ಲಿ ಸಂಭವಿಸಿದೆ.
ಸುಳ್ಯದ ಅರಂತೋಡು ಪೇಟೆಯ ಹೋಟೆಲ್ ವ್ಯವಹಾರ ಮಾಡುತ್ತಿರುವ ಯೋಗೀಶ್ ಎಂಬವರ ಪುತ್ರಿ ಖುಷಿ (8) ಮೃತಪಟ್ಟ ಬಾಲಕಿ.
ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ನಿಂದ ಖುಷಿ ಬಳಲುತ್ತಿದ್ದಳು. ಈಕೆ ಅರಂತೋಡು ಸರಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.ಇದೀಗ ಆಕೆ ಮೃತಪಟ್ಟಿದ್ದಾಳೆ. ಖುಷಿ ತಂದೆ, ತಾಯಿಯನ್ನು ಅಗಲಿದ್ದಾರೆ.