ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ದೋಷ- ಸುಳ್ಳೆ ಸುಳ್ಳು ಸುದ್ದಿ ಮಾಡಿದ ಮಂಗಳೂರಿನ ಕೆಲ ಮಾಧ್ಯಮಗಳು!
ಮಂಗಳೂರು: ಮಾಧ್ಯಮಗಳ
ಮೇಲೆ ನಂಬಿಕೆಗಳು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಆಧಾರರಹಿತ ವರದಿಗಳನ್ನು ಪ್ರಕಟಿಸುವ ಸ್ಪರ್ಧೆಗಳನ್ನು
ಕೆಲ ಮಾಧ್ಯಮಗಳು ನಡೆಸುತ್ತಲೆ ಇದೆ. ಇವುಗಳ ಸಾಲಿನಲ್ಲಿ
ಕೆಲವೊಂದು ಪ್ರತಿಷ್ಠಿತ ಸುದ್ದಿ ಮಾಧ್ಯಮಗಳು ಇರುವುದು ಕಂಡುಬಂದಿದೆ.
ಇಂದು (ಡಿಸೆಂಬರ್ 14) ರಂದು ಹೆಚ್ಚಿನ ಟಿವಿ ಮಾಧ್ಯಮಗಳಲ್ಲಿ ಮಂಗಳೂರಿನ
ಕಾಂಗ್ರೆಸ್ ಕಚೇರಿಯ ವರದಿಗಳು ಬಂದಿದೆ. ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ದೋಷವಿದ್ದು , ಈ ಕಾರಣದಿಂದ
8 ಇದ್ದ ಮೆಟ್ಟಿಲನ್ನು 9 ಕ್ಕೆ ಏರಿಸಲಾಗಿದೆ ಎಂದು ವರದಿ ಮಾಡಿದೆ. ಈ ವರದಿ
ಕಾಂಗ್ರೆಸ್ ಪಕ್ಷದವರನ್ನೆ ದಿಗಿಲುಗೊಳಿಸಿದೆ.
ವಾಸ್ತವವಾಗಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಕೆಲ ದಿನಗಳಿಂದ ಮುಂಭಾಗದಲ್ಲಿ
ನವೀಕರಣ ಕಾಮಗಾರಿ ನಡೆಯುತ್ತಿದೆ. ಕಾಂಗ್ರೆಸ್ ಕಚೇರಿಯ
ನೀರಿನ ಅಂಡರ್ ಟ್ಯಾಂಕ್ ಮುಂಭಾಗದಲ್ಲಿ ಇದೆ. ಇದನ್ನು ಕ್ಲೀನ್ ಮಾಡುವುದು ಮತ್ತು ಮೆಟ್ಟಿಲಿನ ಬಳಿ ಹಾಕಲಾಗಿದ್ದ ಇಂಟರ್ ಲಾಕ್ ಸರಿಪಡಿಸುವ ಸಣ್ಣ ಕೆಲಸವನ್ನು
ಕಾಂಗ್ರೆಸ್ ಕಚೇರಿಯಿಂದ ಮಾಡಲಾಗಿದೆ. ಇಂಟರ್ ಲಾಕ್ ತೆಗೆದ ಜಾಗದಲ್ಲಿ ಒಂದು ಮೆಟ್ಟಿಲು ಹೆಚ್ಚುವರಿಯಾಗಿ
ಸೇರಿಸಲಾಗಿದೆ. ಇನ್ನು ಕಚೇರಿ ಎದುರಿನ ಇಂಟರ್ ಲಾಕ್ ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವ
ಕಾರ್ಯವು ನಡೆಯಲಿದೆ. ಇವಿಷ್ಟು ನಡೆದದ್ದು.
ಆದರೆ ಬೇಜವಬ್ದಾರಿ
ಮಾಧ್ಯಮಗಳು ಈ ಸಣ್ಣ ಕೆಲಸವನ್ನು ಸುಳ್ಳೆ ಸುಳ್ಳು ವರದಿ ಮಾಡಿದೆ. ಕಾಂಗ್ರೆಸ್
ನಾಯಕರಿಗೆ ಗೊತ್ತಿಲ್ಲದ ವಾಸ್ತು ದೋಷಗಳನ್ನು , ಅದರ ಪರಿಹಾರಗಳನ್ನು ಲೈವ್ ನಲ್ಲಿ ಚರ್ಚಿಸಲಾಗಿದೆ.
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷದ ವಿರುದ್ದ ಸುದ್ದಿ ರೂಪಿಸುವ ಸಂಚಿನ ಭಾಗವಾಗಿ ಇಂದು ಮಾಧ್ಯಮಗಳು
ಬ್ರೇಕಿಂಗ್ ನ್ಯೂಸ್ ಗಳನ್ನು ಬಿತ್ತರಿಸಿದೆ. ಈ ಸುದ್ದಿಗಳನ್ನು ನೋಡಿ ಕಾಂಗ್ರೆಸ್ ನಾಯಕರು
ನಗುವುದೊ ಅಳುವುದೋ ಎಂಬ ಸ್ಥಿತಿಯಲ್ಲಿದ್ದಾರೆ.
ಇನ್ನು ಈ ವರದಿಯನ್ನು ನೋಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್
ಕಟೀಲ್ ಟ್ವೀಟ್ ಮಾಡುವ ಮಟ್ಟಕ್ಕೆ ಪರಿಸ್ಥಿತಿಯನ್ನು ಸೃಷ್ಟಿಸಲಾಗಿರುವುದು ಸೋಜಿಗವೆ ಸರಿ