ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸಿದ್ರೆ ಏನಾಗುತ್ತೆ ಗೊತ್ತಾ? ಶುಭಕಾರ್ಯಕ್ಕೂ ಮುನ್ನ ಹೀಗೆ ಮಾಡಿ!
Saturday, December 3, 2022
ಮೊಸರು ಮತ್ತು ಸಕ್ಕರೆ ಎರಡರಲ್ಲೂ ಅನೇಕ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಗ್ಲೂಕೋಸ್ ಸಿಗುತ್ತದೆ. ಹೀಗಾಗಿಯೇ ನಾವು ಅವುಗಳನ್ನು ಒಟ್ಟಿಗೆ ಸೇವಿಸಿದಾಗ ನಮ್ಮ ಮನಸ್ಸು ಮತ್ತು ಮೆದುಳು ದಿನವಿಡೀ ಆರೋಗ್ಯಕರ ಮತ್ತು ಶಕ್ತಿಯುತವಾಗಿರುತ್ತದೆ. ಅಲ್ಲದೆ ನಾವು ಬೇಗನೆ ಸುಸ್ತಾಗುವುದಿಲ್ಲ.
ಶುಭ ಕಾರ್ಯಕ್ಕೂ ಮೊದಲು ಮೊಸರು ಮತ್ತು ಸಕ್ಕರೆ ತಿನ್ನಲು ಅನೇಕ ಆಧ್ಯಾತ್ಮಿಕ ಕಾರಣಗಳಿವೆ. ವಾಸ್ತವವಾಗಿ ಶುಕ್ರ ಮತ್ತು ಬಿಳಿ ಬಣ್ಣವು ಪರಸ್ಪರ ಆಳವಾದ ಸಂಬಂಧವನ್ನು ಹೊಂದಿದೆ. ಇವೆರಡೂ ಶಾಂತಿಯ ಪ್ರತೀಕ. ಮೊಸರು ಮತ್ತು ಸಕ್ಕರೆ ಕೂಡ ಬಿಳಿಯಾಗಿರುತ್ತದೆ. ಇದಕ್ಕಾಗಿಯೇ ಇವುಗಳನ್ನು ತಿನ್ನುವುದರಿಂದ ವ್ಯಕ್ತಿಯ ಕೋಪ-ತಾಪ ದೂರವಾಗಿ ಮನಸ್ಸು ಶಾಂತವಾಗಿ ಏಕಾಗ್ರತೆಯಿಂದ ಇರುತ್ತದೆ.
ಮೊಸರು ಮತ್ತು ಸಕ್ಕರೆ ತಿಂದ ನಂತರ ಮನೆಯಿಂದ ಹೊರಡುವ ಮತ್ತೊಂದು ಪ್ರಯೋಜನವೆಂದರೆ, ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ ಮತ್ತು ಬೇಗನೆ ಹಸಿವು ಉಂಟಾಗುವುದಿಲ್ಲ. ಇವುಗಳನ್ನು ಜೀರ್ಣಿಸಿಕೊಳ್ಳುವುದು ಸಹ ಸುಲಭ.