-->
ಹಣೆಯ ಮೇಲಿನ ಗೆರೆಗಳಿಂದ ನಿಮ್ಮ ಆಯಸ್ಸನ್ನು ತಿಳಿಯಬಹುದಂತೆ

ಹಣೆಯ ಮೇಲಿನ ಗೆರೆಗಳಿಂದ ನಿಮ್ಮ ಆಯಸ್ಸನ್ನು ತಿಳಿಯಬಹುದಂತೆ

 


 

ಮನುಷ್ಯ ಎಷ್ಟು ಸಮಯ ಬದುಕುತ್ತಾನೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದರೂ ಕೆಲವೊಬ್ಬರು ಬೇರೆ ಬೇರೆ ವಿಧಾನಗಳ ಮೂಲಕ ತಮ್ಮ ಆಯಸ್ಸನ್ನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಈಮತಹ ಪ್ರಯತ್ನಗಳ ವಿಧಾನಗಳಲ್ಲಿ ಇವುಗಳು ಮುಖ್ಯವಾಗಿದೆ

 

ಸಾಮುದ್ರಿಕ ಶಾಸ್ತ್ರಸಾಮುದ್ರಿಕ ಶಾಸ್ತ್ರದಲ್ಲಿ ಹಣೆಯ ರೇಖೆಗಳಿಂದ, ವ್ಯಕ್ತಿಯ ವಯಸ್ಸು ಮತ್ತು ಅವನ ಜೀವನವನ್ನು  ತಿಳಿಯಬಹುದಂತೆ. ವ್ಯಕ್ತಿಯ ಹಣೆಯಲ್ಲಿ ಗರಿಷ್ಠ ಐದು ಸಾಲುಗಳು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆಯಂತೆ. ಹಣೆಯಲ್ಲಿ ಐದು ಗೆರೆಗಳನ್ನು ಹೊಂದಿರುವ ವ್ಯಕ್ತಿಯು ಐಷಾರಾಮಿ ಜೀವನವನ್ನು ನಡೆಸುತ್ತಾನೆ ಮಾತ್ರವದಲ್ಲದೆ  ಅಂತಹ ವ್ಯಕ್ತಿಯು ಭೌತಿಕ ಜೀವನದ ಎಲ್ಲಾ ಸಂತೋಷಗಳನ್ನು ಅನುಭವಿಸಿದ ನಂತರವೇ ಈ ಸಾವನ್ನು ಪಡೆಯುತ್ತಾನೆ. ಅಂತಹ ವ್ಯಕ್ತಿಯ ಗರಿಷ್ಠ ವಯಸ್ಸು 90 ರಿಂದ 100 ವರ್ಷಗಳ ನಡುವೆ ಇರುತ್ತದೆ ಎಂದು ಹೇಳಲಾಗುತ್ತದೆ

 

ಹಣೆಯಲ್ಲಿ ನಾಲ್ಕು ಗೆರೆಗಳನ್ನು ಹೊಂದಿರುವ ವ್ಯಕ್ತಿಗಳು ಭೌತಿಕ ಸುಖಗಳಿಂದ ವಂಚಿತರಾಗುತ್ತಾರಂತೆ. ಅವರು  ತೊಂದರೆಗೀಡಾದ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅವರು ಸುಮಾರು 80 ವರ್ಷಗಳವರೆಗೆ ಬದುಕಿರಬಹುದು ಎಂದು ಹೇಳಲಾಗುತ್ತದೆ.

 

ಹಣೆಯ ಮೇಲೆ ಮೂರು ಗೆರೆಗಳನ್ನು ಹೊಂದಿರುವ ವ್ಯಕ್ತಿ. ಭಗವಾನ್ ಭೋಲೆನಾಥನ ಕೃಪೆಗೆ ಪಾತ್ರರಾಗಿರುತ್ತಾರೆ ಎನ್ನುತ್ತಾರೆ.  ಶಾಂತತೆಯ ಕಡೆಗೆ ಅವನ ಒಲವು ಹೆಚ್ಚಾಗತೊಡಗುತ್ತದೆ. ಅಂತಹ ವ್ಯಕ್ತಿಯು ಶ್ರೀಮಂತನಾಗಿರುತ್ತಾನೆ. ಅವನು ತನ್ನ ಜ್ಞಾನದಿಂದ ಗುರುತಿಸಲ್ಪಡುತ್ತಾನೆ ಎಂದು ಹೇಳಲಾಗಿದೆ.  ಧಾರ್ಮಿಕ ವಿಧಿವಿಧಾನಗಳ ಬಗ್ಗೆಯೂ ಅವನಿಗೆ  ಜ್ಞಾನವಿರುತ್ತದೆ ಎಂದು ಇದೆ.

 

ಹಣೆಯ ಮೇಲೆ ಎರಡು ಗೆರೆಗಳನ್ನು ಹೊಂದಿರುವವರಲ್ಲಿ  ಹಲವರು ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ಹಣೆಯ ಮೇಲೆ ರೇಖೆಯನ್ನು ಹೊಂದಿರದ ವ್ಯಕ್ತಿಯ ಆಯಸ್ಸು ಕಡಿಮೆ ಅಂತೆ.

 

Ads on article

Advertise in articles 1

advertising articles 2

Advertise under the article