ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ 'ಹೆಲ್ಪ್ ಲೈನ್' ಪ್ರಯೋಗ
Friday, December 30, 2022
ಮಂಗಳೂರು: ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಆತಂಕಗೊಂಡಿರುವ ಕರಾವಳಿಯ ಹಿಂದೂ ಸಂಘಟನೆಗಳು ಈ ಪ್ರಯತ್ನವನ್ನು ಮುರಿಯಲು ಹೆಲ್ಪ್ ಲೈನ್ ತಂತ್ರ ಹೂಡಿದೆ.
ಇದರ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗಿದೆ. ಎರಡು ವಾಟ್ಸ್ಆ್ಯಪ್ ಸಂಖ್ಯೆಗಳು ಸೇರಿದಂತೆ ಇಮೇಲ್ ಐಡಿಯನ್ನು ನೀಡಲಾಗಿದೆ. ಮನೆಯಲ್ಲಿಯೇ ಆಗಲಿ, ನೆರೆಹೊರೆಗಳಲ್ಲಿ, ಊರು ಹಳ್ಳಿಗಳಲ್ಲಿಯೇ ಆಗಲಿ ಲವ್ ಜಿಹಾದ್ ನಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಿ ಎಂದು ಸೂಚಿಸಲಾಗಿದೆ. ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ಹೇಳಿದೆ.
ಈ ಮೂಲಕ 9148658108, 9591658108 ಎಂಬ ಲವ್ ಜಿಹಾದ್ ಹೆಲ್ಪ್ ಲೈನ್ ಮೊಬೈಲ್ ಸಂಖ್ಯೆ ಹಾಗೂ antilovejihadmlr@gmail.com ಇಮೇಲ್ ಐಡಿ ಇರುವ ಪೋಸ್ಟರ್ ವೈರಲ್ ಆಗಿದೆ. ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಅಧಿಕವಾಗಿದೆ. ಆದ್ದರಿಂದ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ ಅನ್ನು ಸಂಪರ್ಕಿಸಿ. ಹೆತ್ತವರು, ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ನಮ್ಮನ್ನು ಸಂಪರ್ಕಿಸಿ. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುತ್ತದೆ. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ ಎಂದು ಟ್ಯಾಗ್ ಲೈನ್ ಇರುವ ಈ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.