-->
ಒಳಗಡೆ ಬಂದು ಸಾವಿರ ರೂ. ತೆತ್ತು ಯಾವ ಯುವತಿಯರನ್ನಾದರೂ ಆಯ್ಕೆ ಮಾಡಿ: ಚೆನ್ನೈನ ಹೊಟೇಲ್ ಮುಂದಿನ ಫಲಕದ ಅಸಲಿಯತ್ತು ಏನಿತ್ತು ಗೊತ್ತೇ?

ಒಳಗಡೆ ಬಂದು ಸಾವಿರ ರೂ. ತೆತ್ತು ಯಾವ ಯುವತಿಯರನ್ನಾದರೂ ಆಯ್ಕೆ ಮಾಡಿ: ಚೆನ್ನೈನ ಹೊಟೇಲ್ ಮುಂದಿನ ಫಲಕದ ಅಸಲಿಯತ್ತು ಏನಿತ್ತು ಗೊತ್ತೇ?


ಚೆನ್ನೈ: ಒಳಗಡೆ ಬಂದು ಸಾವಿರ ರೂ‌. ತೆತ್ತು ಯಾವ ಯುವತಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್ ನಲ್ಲಿ ಅಳವಡಿಸಿರುವ ವಿವಾದಾತ್ಮಕ ಡಿಜಿಟಲ್ ಜಾಹಿರಾತು ಫಲಕವನ್ನು ಗ್ರೇಟರ್ ಚೆನ್ನೈ ಪೊಲೀಸರು ತೆರವುಗೊಳಿಸಿ ಹೋಟೆಲ್ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಿಟಲ್ ಮೌಂಟ್ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಇದರಲ್ಲಿ  ಪುರುಷರೇ ಒಳಗಡೆ ಬಂದು ಒಂದು ಸಾವಿರ ರೂಮ ನೀಡಿ ಯಾವುದೇ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು. ಇದನ್ನು ಕಂಡಿದ್ದ ನಾಗರಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಇದರ ಫೋಟೋ ಮತ್ತು ವೀಡಿಯೋ ರೆಕಾರ್ಡ್ ಮಾಡಿದ್ದರು. ಬಳಿಕ ಈ ವೀಡಿಯೋ ಹಾಗೂ ಫೋಟೊವನ್ನು ಅಳವಡಿಸಿ ಟ್ವಿಟರ್‌ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.  

ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್ ಜಾಹಿರಾತು ಫಲಕವನ್ನು ತೆಗೆದಿದ್ದಾರೆ‌‌. ಪೊಲೀಸರ ಪ್ರಕಾರ, ಹೋಟೆಲ್‌ನ ವೈ-ಫೈ ನೆಟ್‌ವರ್ಕ್ ಹ್ಯಾಕ್ ಮಾಡಿದ ಅಪರಿಚಿತ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್‌ವರ್ಡ್‌ನಿಂದ ನೆಟ್‌ವರ್ಕ್ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ. ಡಿಸ್‌ಪ್ಲೇ ಸಂದೇಶಕ್ಕಾಗಿ ಕೋಡ್‌ಗಳನ್ನು ಬದಲಾಯಿಸುವ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ಯಾರೋ ಕಿಡಿಗೇಟಿ ಡಿಜಿಟಲ್ ಬೋರ್ಡ್ ಸಂದೇಶವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯನ್ನು ನೀಡಿದ್ದಾರೆ.

ಹೋಟೆಲ್‌ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆರೆದ ವೈ-ಫೈ ನೆಟ್‌ವರ್ಕ್‌ಗಳ ದುರುಪಯೋಗದ ಬಗ್ಗೆ ಜಾಗೃತರಾಗಿರಲು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ ಮತ್ತು ವೈ-ಫೈ ಅಥವಾ ವೈರ್ಡ್ ಸಂಪರ್ಕದ ಮೂಲಕ ಫಲಕಕ್ಕೆ ಪ್ರವೇಶವನ್ನು ಮರುಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ಹೋಟೆಲ್ ಮಾಲಕರನ್ನು ಪೊಲೀಸರು ಕೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article