
ವಿವಾಹವಾಗಲು ಕನ್ಯೆ ಸಿಗಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ಯುವಕ
Saturday, December 31, 2022
ಧಾರವಾಡ: ವಿವಾಹವಾಗಲು ಕನ್ಯೆ ಸಿಗಲಿಲ್ಲವೆಂದು ಮನನೊಂದ ಯುವಕನೋರ್ವ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ವರದಿಯಾಗಿದೆ.
ಸಂತೋಷ್ ಕೊರಡಿ ಆತ್ಮಹತ್ಯೆಗೆತ್ನಿಸಿದ ಯುವಕ.
ಮದುವೆಯ ವಯಸ್ಸಾದರೂ ಸರಿಯಾದ ಹೆಣ್ಣು ದೊರಕದೆ ವಿವಾಹವಾಗಿಲ್ಲವೆಂದು ಮನನೊಂದು ಸಂತೋಷ್ ಕೊರಡಿ ಅಮ್ಮಿನಬಾವಿ ಗ್ರಾಮದ ಸ್ಮಶಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಸುಟ್ಟ ಗಾಯಗಳಿಂದ ಗಂಭೀರವಾಗಿರುವ ಸಂತೋಷ್ ರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.