ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುತ್ತಿಲ್ಲವೇ..? ಹಾಗಾದರೆ ಈ TIPS FOLLOW ಮಾಡಿ..!
Monday, December 26, 2022
ರಾತ್ರಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆಗ ಮಾತ್ರ 8 ಗಂಟೆಗಳ ಕಾಲ ಆರಾಮವಾಗಿ ನಿದ್ದೆಗೆ ಜಾರುವುದು ಸಾಧ್ಯವಾಗುತ್ತದೆ.
ನೆಮ್ಮದಿಯ ನಿದ್ದೆ ಬರಬೇಕಾದರೆ, ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಆಯಾಸ ನಿವಾರಣೆಯಾಗುತ್ತದೆ.
2. ಧ್ಯಾನ ಮಾಡಿ :
ಧ್ಯಾನ ಜೀವನದ ಪ್ರಮುಖ ಭಾಗವಾಗಿದೆ. ಈ ಮೂಲಕ ಉದ್ವೇಗ ಮತ್ತು ಆತಂಕವನ್ನು ಒದ್ದೋಡಿಸಬಹುದು. ಇದಕ್ಕಾಗಿ, ತಜ್ಞರ ಸಹಾಯವನ್ನು ತೆಗೆದುಕೊಳ್ಳಿ.
3. ರಾತ್ರಿಯಲ್ಲಿ ಟೀ ಕುಡಿಯಬೇಡಿ
ಟೀ ಕುಡಿಯುವುದರಿಂದ ಆಯಾಸ ದೂರವಾಗುತ್ತದೆ. ತಾಜಾತನದ ಅನುಭವವಾಗುತ್ತದೆ. ಆದರೆ, ರಾತ್ರಿ ಚಹಾ ಕುಡಿದರೆ ಸರಿಯಾಗಿ ನಿದ್ದೆ ಬರುವುದಿಲ್ಲ.