10ರ ವಯಸ್ಸಿನಲ್ಲಿ ಅತ್ಯಾಚಾರ ಸಂತ್ರಸ್ತೆಯಾಗಿ, ಭಿಕ್ಷಾಟನೆ ಮಾಡಿದ ಈಕೆ ಈಗ ಅಂತಾರಾಷ್ಟ್ರೀಯ ಬ್ಯೂಟಿಕ್ವೀನ್
Thursday, January 5, 2023
ನವದೆಹಲಿ: ಕೆಲವರ ಬದುಕು ಯಾವ ರೀತಿ ಅನಿರೀಕ್ಷಿತ ತಿರುವುಗಳು ಸಿಗುತ್ತದೆ. ಅದು ಯಾವ ಕೊನೆಯನ್ನೂ ಮುಟ್ಟಿಸಬಹುದು. ಅಂಥಹ ಒಂದು ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿರುವ ಓರ್ವಳು ಇದೀಗ ಬ್ಯೂಟಿಟ್ವಿನ್. ಈಕೆಯ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಮಾದರಿ ಎಂದರೂ ತಪ್ಪಲ್ಲ. ಏಕೆಂದರೆ ಈಕೆ ಒಂದು ಕಾಲದಲ್ಲಿ ಭಿಕ್ಷುಕಿಯಾಗಿದ್ದು, ಅತ್ಯಾಚಾರ ಸಂತ್ರಸ್ತೆಯೂ ಆಗಿದ್ದಳು. ಇದು ಇಂದು ಮೊದಲ ಟ್ರಾನ್ಸ್‌ಜೆಂಡರ್ ಇಂಟರ್‌ನ್ಯಾಷನಲ್ ಬ್ಯೂಟಿಟ್ವಿನ್ ಎನಿಸಿಕೊಂಡಿರುವ ನಾಝ್ ಜೋಶಿಯ ದುರಂತಮಯ ಕಥೆ.
ನಾಝ್ ಜೋಶಿಯವರು 2021-22ರ ಎಂಪ್ರೆಸ್ ಅರ್ಥ ಶೀರ್ಷಿಕೆಗೆ ಪಾತ್ರರಾಗಿ, ಪ್ರಪ್ರಥಮ ತೃತೀಯಲಿಂಗಿ ಬ್ಯೂಟಿಕ್ವೀನ್ ಎನಿಸಿಕೊಂಡಿರುತ್ತಾರೆ. ದೆಹಲಿಯಲ್ಲಿ ಹುಟ್ಟಿರುವ ನಾಝ್ ಆರಂಭದಲ್ಲಿ ಹುಡುಗನಂತೆ ಇದ್ದರೂ ವರ್ತನೆ ಹುಡುಗಿಯಂತಿತ್ತು. ಕೊನೆಗೆ ತೃತೀಯಲಿಂಗಿ ಎಂದು ತಿಳಿದಾಕ್ಷಣ ಆಕೆಯ ತಾಯಿ ನಾಝ್ ಳನ್ನು ಸಲಹಲು ತನ್ನ ತಮ್ಮನ ಬಳಿ ಕಳುಹಿಸಿದ್ದಳು. ಆದರೆ ಆಕೆಯ ಸೋದರಮಾವ ಹತ್ತರ ವಯಸ್ಸಿನ ನಾಝ್ ಮೇಲೆ ತನ್ನ ಗೆಳೆಯರೊಂದಿಗೆ ಸೇರಿ ಅತ್ಯಾಚಾರ ಮಾಡಿಬಿಟ್ಟಿದ್ದ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದ ನಾಝ್ ಆಸ್ಪತ್ರೆಯಲ್ಲಿದ್ದಾಗ ಇನ್ನೊಬ್ಬ ತೃತೀಯಲಿಂಗಿ ಈಕೆಯನ್ನು ಕರೆದೊಯ್ದು ತನ್ನೊಂದಿಗೆ ಇರಿಸಿಕೊಂಡಿದ್ದರು. ಬಳಿಕ ಬೀದಿಯಲ್ಲಿ ಭಿಕ್ಷಾಟನೆ ಮಾಡಿದ್ದ ನಾಝ್, ಜೀವನ ನಿರ್ವಹಣೆಗಾಗಿ ಪಾರ್ಲರ್ ಗಳಲ್ಲಿ ಮಸಾಜ್ ಮಾಡುವ ಕೆಲಸ ಕೂಡ ಮಾಡಿದ್ದಳು.
ಈ ಎಲ್ಲ ಸಂಕಷ್ಟಗಳ ನಡುವೆಯೂ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದ ನಾಝ್, 2013ರಲ್ಲಿ ಲಿಂಗಪರಿವರ್ತನೆ ಮಾಡಿಕೊಂಡು ರೂಪದರ್ಶಿಯಾದರು. ಇದೀಗ ಆಕೆ ಬ್ಯೂಟಿಕ್ಟಿನ್ ಆಗಿ ಹೊರಹೊಮ್ಮಿದ್ದಾರೆ. ಬಳಿಕ ಟ್ರಾನ್ಸ್‌ಜೆಂಡರ್ ಸೆಕ್ಸ್ ವರ್ಕರ್ ಒಬ್ಬರ ಫೋಟೋಶೂಟ್ ನಿರೀಕ್ಷೆಯಲ್ಲಿ ಫೋಟೋಗ್ರಾಫರ್ ವೊಬ್ಬರನ್ನು ನಾಝ್ ಭೇಟಿಯಾದರು. ಅಲ್ಲಿ ಒಂದು ಫೋಟೋಶೂಟ್ ಮಾಡಿಸಿಕೊಂಡರು. ಇದು ಸೆನ್ಸೆಷನಲ್ ಎನಿಸಿ ಮ್ಯಾಗಜಿನ್ ಕವರ್‌ಪೇಜ್‌ನಲ್ಲಿ ರಾರಾಜಿಸಿತು. ಬಳಿಕ ಭಾರತದ ಪ್ರಥಮ ತೃತೀಯಲಿಂಗಿ ಬ್ಯೂಟಿಕ್ಟಿನ್ ಆಗಿ ಹೊರಹೊಮ್ಮಿದ ನಾಝ್, ಕ್ರಮೇಣ 8 ಸೌಂದರ್ಯಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಈಗ ಪ್ರಪ್ರಥಮ ಟ್ರಾನ್ಸ್‌ಜೆಂಡರ್ ಇಂಟರ್‌ನ್ಯಾಷನಲ್ ಬ್ಯೂಟಿಕ್ಟಿನ್ ಆಗಿ ಹೊರಹೊಮ್ಮಿದ್ದಾರೆ.