ಪ್ರಯಾಣಿಕರ ಲಗೇಜ್ ನಲ್ಲಿತ್ತು ಅಪರೂಪದ ಜೀವಿಗಳು: ಮಹಿಳೆ ಸೇರಿದಂತೆ ನಾಲ್ವರು ಅರೆಸ್ಟ್, 157 ಪ್ರಾಣಿಗಳ ರಕ್ಷಣೆ
Saturday, January 28, 2023
ಬೆಂಗಳೂರು: ಅಪರೂಪದ ಜೀವಿಗಳನ್ನು ವಿದೇಶದಿಂದ ವಿಮಾನದಲ್ಲಿ ಕಳ್ಳ ಸಾಗಾಣೆ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು. 157 ಪ್ರಾಣಿಗಳನ್ನು ರಕ್ಷಿಸಿದ್ದಾರೆ.
ಬ್ಯಾಂಕಾಕ್‌ನಿಂದ ವಿಮಾನದಲ್ಲಿ ಆಗಮಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.22ರಂದು ಬಂದಿಳಿದ ಮಹಿಳೆ ಸೇರಿದಂತೆ ನಾಲ್ವರನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಅವರ ಲಗೇಜ್ ನಲ್ಲಿ ಈ ವೇಳೆ ಅಪರೂಪದ 4 ಸಸ್ತನಿಗಳು ಮತ್ತು 14 ಸರೀಸೃಪಗಳು ಪತ್ತೆಯಾಗಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ಅಪರೂಪದ ಜೀವಿಗಳನ್ನು ರಕ್ಷಿಸಿದ್ದಾರೆ.
ಅಲ್ಲದೆ, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ದೊರೆತ ಮಾಹಿತಿಯನ್ವಯ ಬೆಂಗಳೂರಿನ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಲ್ಲಿ 48 ವಿವಿಧ ಜಾತಿಯ 139 ಪ್ರಾಣಿಗಳನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳಿಂದ ಸಂರಕ್ಷಣೆ ಮಾಡಿದ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಪಾರ್ಕ್‌ಗೆ ಹಸ್ತಾಂತರ ಮಾಡಲಾಗಿದೆ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.