-->
18ರ ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ರೂ. ಖರ್ಚು ಮಾಡುತ್ತಿರುವ ಉದ್ಯಮಿ

18ರ ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ರೂ. ಖರ್ಚು ಮಾಡುತ್ತಿರುವ ಉದ್ಯಮಿ


ನವದೆಹಲಿ: ಚಿರ ಯೌವನ ಯಾರಿಗೆ ಬೇಡ ಹೇಳಿ?. ಎಲ್ಲರೂ ಯೌವ್ವನವನ್ನು ಉಳಿಸಿಕೊಳ್ಳಲು ಹಪಹಪಿಕೆ ಮಾಡುವವರು. ಇಲ್ಲೊಬ್ಬ ಬಯೊಟೆಕ್ ಕಂಪೆನಿಯ ಸಿಇಒ ಚಿರ ಯೌವನದ ಹಿಂದೆ ಬಿದ್ದಿದ್ದಾನೆ. ಆತ ತಾನು ನವ ಯುವಕನಂತೆ ಕಾಣಲು ವರ್ಷಕ್ಕೆ ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡುತ್ತಾನಂತೆ.

ಕರ್ನಲ್‌ಕೋದ ಕ್ಯಾಲಿಫೋರ್ನಿಯಾ ಮೂಲದ ಉದ್ಯಮಿ ಬ್ರಿಯಾನ್ ಜಾನ್ಸನ್ 18ರ ಯುವಕನಂತೆ ಇರಲು ಈ ವರ್ಷ ಅವರು 2 ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಲಿದ್ದಾನೆ. “ಪ್ರಾಜೆಕ್ಟ್ ಬ್ಲೂಪ್ರಿಂಟ್” ಮೂಲಕ ತನ್ನ ಎಪಿಜೆನೆಟಿಕ್ ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆಗೊಳಿಸಿರುವುದಾಗಿ ಹೇಳಿಕೊಂಡಿದ್ದಾನೆ. 45 ವರ್ಷದ ಜಾನ್ಸನ್, 30 ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದು, ಅವರು ಈತನ ಯೌನವನ್ನು ಕಾಪಾಡಲು ಸಹಕರಿಸುತ್ತಿದ್ದಾರೆ. ಜಾನ್ಸನ್‌ನ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಲು ವೈದ್ಯರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಾಜೆಕ್ಟ್ ಬ್ಲೂಪ್ರಿಂಟ್ ಅಡಿಯಲ್ಲಿ ಜಾನ್ಸನ್ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಸಸ್ಯಹಾರಿ ಆಹಾರವನ್ನು ಮಾತ್ರ ತಿನ್ನುವ ಇವರು ದಿನಕ್ಕೆ 1,977 ಕ್ಯಾಲೊರಿಗಳನ್ನು ಸೇವಿಸುತ್ತಾರೆ. ನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುವ ಇವರು ಪ್ರತಿ ರಾತ್ರಿ ಅದೇ ಸಮಯಕ್ಕೆ ಮಲಗುತ್ತಾರೆ. ಬೆಳಗ್ಗೆ 5 ಗಂಟೆಗೆ ಏಳುವ ಅವರು, ಬೆಳಗ್ಗೆ ಎರಡು ಡಜನ್‌ಗಳಷ್ಟು ಸಪ್ಲಿಮೆಂಟ್ ಗಳನ್ನು ಮತ್ತು ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ರೈಡ್‌ಗಳ ಜೊತೆಗೆ ಹಸಿರು ತರಕಾರಿ ಅಥವಾ ಸೊಪ್ಪಿನ ರಸವನ್ನು ಸೇವಿಸುತ್ತಾರೆ.

ದಿನವಿಡೀ, ಜಾನ್ಸನ್‌ನ ಶರೀರದ ಪ್ರಮುಖ ಅಂಶಗಳನ್ನು ಅಳೆದು ಮೇಲ್ವಿಚಾರಣೆ ಮಾಡಲಾಗುತ್ತದೆ. ಅಲ್ಟಾಸೌಂಡ್‌ಗಳು, ಎಂಆರ್‌ಐಗಳು, ಕೊಲೊನೋಸ್ಕೋಪಿಗಳು ಮತ್ತು ರಕ್ತ ಪರೀಕ್ಷೆಗಳು 45 ವರ್ಷ ವಯಸ್ಸಿನ ಇವರ ಜೀವನದಲ್ಲಿ ನಿಯಮಿತ ಭಾಗವಾಗಿದೆ. ಅವರ ತೂಕ, ದೇಹದ ತೂಕ, ದೇಹದ ಕೊಬ್ಬು, ರಕ್ತದಲ್ಲಿನ ಗ್ಲೋಕೋಸ್ ಮಟ್ಟಗಳು ಮತ್ತು ಹೃದಯ ಬಡಿತದ ವ್ಯತ್ಯಾಸಗಳನ್ನು ಪ್ರತಿದಿನ ಅಳೆಯಲಾಗುತ್ತದೆ.

ಅಲ್ಲದೇ ಯಂತ್ರವೊಂದು ರಾತ್ರಿ ನಿದ್ದೆಯಲ್ಲಿ ಈತ ರಾತ್ರಿ ಎಷ್ಟು ಬಾರಿ ಕನಸಿನಲ್ಲಿ ಲೈಂಗಿಕ ಆಸಕ್ತಿಗೆ ಒಳಗಾಗುತ್ತಾನೆ ಎಂಬುದನ್ನೂ ಟ್ರ್ಯಾಕ್ ಮಾಡುತ್ತದೆ. ಅದು ಹದಿಹರೆಯದವರಂತೆಯೇ ಇದೆ ಎಂದು ವರದಿ ಹೇಳಿವೆ. ಒಟ್ಟಿನಲ್ಲಿ ಚಿರಯೌವನದ ಹುಚ್ಚು ಸಾವು ಇರುವ ತನಕವೂ ಜಗತ್ತಿನಲ್ಲಿ ಮುಂದುವರೆಯುವುದು ಸುಳ್ಳಲ್ಲ.

Ads on article

Advertise in articles 1

advertising articles 2

Advertise under the article