ಮಂಗಳೂರು: 18 ದಿನಗಳಲ್ಲಿ ಏರ್ಪೋರ್ಟ್ ನಲ್ಲಿ 2 ಕೋಟಿ ಮೌಲ್ಯದ ಚಿನ್ನ ಸೀಝ್
Friday, January 20, 2023
ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ದಿನಗಳ ಅವಧಿಯಲ್ಲಿ ಅಕ್ರಮ ಸಾಗಾಟದ 2 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ.
ಜ.1 - 18ರ ನಡುವಿನ ಅವಧಿಯಲ್ಲಿ ದುಬೈ ಹಾಗೂ ಅಬುಧಾಬಿಯಿಂದ ಆಗಮಿಸಿರುವ 8 ಪುರುಷ ಪ್ರಯಾಣಿಕರಿಂದ ಅಕ್ರಮ ಸಾಗಾಟದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ, ಡಬಲ್ ಲೇಯರ್ಡ್ ವೆಸ್ಟ್ (ಬನಿಯನ್) ಒಳಗೆ ಪೇಸ್ಟ್ ರೂಪದಲ್ಲಿ, ಬಾಯಿಯ ಕುಳಿಯಲ್ಲಿ, ಗುದನಾಳದಲ್ಲಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ 3677.000 ಗ್ರಾಂ ತೂಕದ 2,01,69.800 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಆಗಮಿಸಿದ ಪ್ರಯಾಣಿಕನಿಂದ 3,20,265 ರೂ. ಮೌಲ್ಯದ ಸಿಗರೇಟ್ ಮತ್ತು ಇ-ನಿಕೋಟಿನ್ ದ್ರವಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆತ ತನ್ನ ಬ್ಯಾಗ್ ನಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ. ಪರಿಶೀಲನೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.