-->
ಆಳ್ವಾಸ್‌ನಲ್ಲಿ ಜರುಗಿತು ‘ಯೋಗಥಾನ್ 2023’’

ಆಳ್ವಾಸ್‌ನಲ್ಲಿ ಜರುಗಿತು ‘ಯೋಗಥಾನ್ 2023’’

 

 


ಮೂಡುಬಿದಿರೆ: ಯೋಗದ ಮಹತ್ವವನ್ನು, ಅದರ ಪ್ರಯೋಜನವನ್ನು ಇಡೀ ಜಗತ್ತಿಗೆ ಸಾರಿದ ದೇಶ ಭಾರತ. ಇಂತಹ ಯೋಗದ ಪ್ರಾಮುಖ್ಯತೆಯನ್ನು ಸಾರುವÀ ವಿಶಿಷ್ಟವಾದ ಉತ್ಸವವನ್ನು ಕರ್ನಾಟಕದಲ್ಲಿ ಯೋಗಥಾನ್ ಮೂಲಕ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ತಿಳಿಸಿದರು

ರಾಜ್ಯ ಸರ್ಕಾರದ ನಿರ್ದೇಶನದಂತೆ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ದಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಡಿಯಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವನ್ನು  ಸಾಧಿಸುವ ಹಿನ್ನಲೆಯಲ್ಲಿ ಯೂತ್ ಫಾರ್ ಯೋಗ ಥೀಮ್ನೊಂದಿಗೆಯೋಗಥಾನ್ 2023’’ನ್ನು ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.




ಪ್ರಾಣಾಯಾಮದ ಜತೆಗೆ ಯೋಗಾಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ , ತ್ರಿಕೋನಾಸನ , ವಜ್ರಾಸನ, ಶಶಂಕಾಸನ , ಅರ್ಧವೃಷ್ಟಾಸನ, ಪೂರ್ಣವೃಷ್ಟಾಸನ, ಉತ್ತಾನ ಮಂಡುಕಾಸನ, ದಂಡಾಸನ, ವಕ್ರಾಸನ ಸೇರಿದಂತೆ ಹಲವು ಆಸನಗಳನ್ನು ಮಾಡಿಸಿಲಾಯಿತು. ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಅನಂತ ಕೃಷ್ಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 

ಕಾರ್ಯಕ್ರಮದಲ್ಲಿ  ಮೂಲ್ಕಿ-ಮೂಡುಬಿದಿರೆಯ ಶಾಸಕರಾದ  ಉಮಾನಾಥ ಕೋಟ್ಯಾನ್,  ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ,  . ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್,  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ, ಯುವಜನ ಮತ್ತು ನಾಗರಿಕ ಸೇವಾ ಇಲಾಖೆಯ ಸಹ ನಿರ್ದೇಶಕರಾದ ರವಿ ನಾಯ್ಕ, ಮೂಡುಬಿದಿರೆ ಪುರಸಭೆ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಟ್ರಸ್ಟಿ ವಿವೇಕ್ ಆಳ್ವ,   ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಪ್ರಾಚಾರ್ಯ  ಡಾ ವನಿತಾ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

 

45 ನಿಮಿಷಗಳ ಕಾಲ ನಡೆದ ಯೋಗಥಾನ್ ಕರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿA ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 27632 ಜನರು ಪಾಲ್ಗೊಂಡರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಗಥಾನ್ ಕರ್ಯಕ್ರಮಕ್ಕೆ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಇಡೀ ವೇದಿಕೆಯ ಅಂದವನ್ನು ಹೆಚ್ಚಿಸಲು ರೆಡ್ ಕಾರ್ಪೆಟ್ನ್ನು ಹೊದಿಸಲಾಗಿತ್ತು.  ಆಗಮಿಸಿದ ಯೋಗಾಸಕ್ತರನ್ನು ಕೋಡ್ ಸ್ಕಾö್ಯನ್ ಮಾಡುವುದರ ಮೂಲಕ  ವೇದಿಕೆಗೆ ಬಿಡಲಾಯಿತು. ಅತ್ಯಂತ ಶಿಸ್ತು ಸಂಯಮದಿA ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಯಂ ಸೇವಕರು ಸಹಕರಿಸಿದರು. ಕಾರ್ಯಕ್ರಮದಲ್ಲಿ  ಕೊನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.   ಕಾರ್ಯಕ್ರಮದ ದಾಖಲೀಕರಣ ಹಾಗೂ ನೇರ ಪ್ರಸಾರವನ್ನು ಆಯುಷ್ ಟಿವಿ ವಹಿಸಿತ್ತು.   ಕಾರ್ಯಕ್ರಮವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ರಾಜೇಶ್  ನಿರೂಪಿಸಿದರು.   

Ads on article

Advertise in articles 1

advertising articles 2

Advertise under the article