-->
 36 ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

36 ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ



ಮೂಡುಬಿದಿರೆ:  ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ  ಹಾಗೂ ನವದೆಹಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಆಶ್ರಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳದ ಏಕಾಂಕ ನಾಟಕ ಪ್ರಥಮ ಹಾಗೂ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಕಾಲೇಜು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಆಳ್ವಾಸ್ ಕಾಲೇಜು ತಂಡವು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿತ್ತು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಮ್ ಸುಳ್ಯ ಮಾರ್ಗದರ್ಶನದಲ್ಲಿ ಭುವನ್ ಮಣಿಪಾಲ್ ನಿರ್ದೇಶಿಸಿದ ಹಾಗೂ ಉಜ್ವಲ್ ಯುವಿ ವಿನ್ಯಾಸ ಮಾಡಿದ ‘ದುರ್ಯೋಧ’ ನಾಟಕ ಪ್ರಥಮ ಬಹುಮಾನ ಪಡೆಯಿತು.

ಸುರೇಶ್ ಕುಮಾರ್ ನಿರ್ದೇಶನದ ಜಾನಪದ ನೃತ್ಯವು ದ್ವಿತೀಯ ಸ್ಥಾನ ಪಡೆಯಿತು. ಸಾಂಸ್ಕೃತಿಕ ಪ್ರತಿಭೆಗಳಿಗೆ ದತ್ತು ಯೋಜನೆ ಅಡಿಯಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಿಜೇತರನ್ನು ಅಭಿನಂದಿಸಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರವು 11 ಬಾರಿ ರಾಷ್ಟ್ರೀಯ ರಂಗ ಪುರಸ್ಕಾರಕ್ಕೆ ಪಾತ್ರವಾಗಿದೆ. 


Ads on article

Advertise in articles 1

advertising articles 2

Advertise under the article