ಶನಿ ಅಮವಾಸೆ ಎಂದೂ ರೂಪುಗೊಳ್ಳುತ್ತಿದೆ 4 ಯೋಗಗಳು! ಇದು 30 ವರ್ಷದ ಬಳಿಕ ನಡೆದ ಅದ್ಭುತ.! ಇದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?
Friday, January 20, 2023
30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿರುವುದು ಅಪರೂಪದ ಘಟನೆ ಆಗಿದ್ದು, ಇದರೊಂದಿಗೆ ಇನ್ನೂ 4 ಯೋಗಗಳು ಕೂಡ ಈ ದಿನ ರೂಪುಗೊಳ್ಳುತ್ತವೆ.
ಪಂಚಾಂಗದ ಪ್ರಕಾರ ಶನಿ ಅಮಾವಾಸ್ಯೆಯಂದು ಖಪ್ಪರ ಯೋಗ, ಚತುಗ್ರಾಹಿ ಯೋಗ, ಷಡಷ್ಟಕ ಯೋಗ ಮತ್ತು ಸಂಸಪ್ತಕ ಯೋಗಗಳು ರೂಪುಗೊಳ್ಳುತ್ತವೆ. ಇದರಿಂದ ಬಹಳಷ್ಟು ಲಾಭಗಳಿದ್ದು, ನಮ್ಮ ಜೀವನದಲ್ಲಿ ಸಹ ಬದಲಾವಣೆಗಳು ಆಗುತ್ತದೆ.
ಇದರೊಂದಿಗೆ ಶನಿ ಸಾಡೇಸತಿ ಅಥವಾ ಧೈಯಾದಿಂದ ಬಳಲುತ್ತಿರುವವರು ಈ ದಿನ ಶನಿ ಸಮಯದಲ್ಲಿ ಅರಳಿ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಹಚ್ಚಬೇಕು. ಹಾಗೆಯೇ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ.
ಶನಿ ಚಾಲೀಸಾ ಮತ್ತು ಶನಿ ದೇವಿನಿ ಬೀಜ ಮಂತ್ರವನ್ನು ಪಠಿಸಬೇಕು. ಇಷ್ಟೇ ಅಲ್ಲದೇ, ಕಪ್ಪು ಹೊದಿಕೆ, ಕಪ್ಪು ಬೂಟುಗಳು, ಕಪ್ಪು ಎಳ್ಳು ಬೀಜಗಳು, ಕಪ್ಪು ಉದ್ದಿನ ಬೇಳೆ ದಾನ ಮಾಡುವುದು ಉತ್ತಮ.
ಹೀಗೆ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. ಮತ್ತೊಂದೆಡೆ ಆ ದಿನ ಮೌನಿ ಅಮಾವಾಸ್ಯೆ ಇರುವುದರಿಂದ ಮುಂಜಾನೆಯೇ ಗಂಗೆಯಲ್ಲಿ ಸ್ನಾನ ಮಾಡಿ ನಂತರ ವಿಷ್ಣುವನ್ನು ಪೂಜಿಸಬೇಕು.