ಫೆಬ್ರವರಿ 7ರಂದು ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ,ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ!
Monday, January 16, 2023
ಫೆಬ್ರವರಿ 7ರಂದು ಮಕರ ರಾಶಿಗೆ ಬುಧನ ಪ್ರವೇಶದಿಂದ ರೂಪುಗೊಳ್ಳಲಿರುವ ಬುಧಾದಿತ್ಯ ಯೋಗದಿಂದಾಗಿ ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಲಿದೆ.
ಮೇಷ ರಾಶಿ:
ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಕನ್ಯಾ ರಾಶಿ:
ಬುಧಾದಿತ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಗರಿಷ್ಠ ಲಾಭದಾಯಕವಾಗಿದೆ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ಬಲಶಾಲಿಯಾಗಲಿದ್ದಾರೆ.
ತುಲಾ ರಾಶಿ:
ಬುಧಾದಿತ್ಯ ಯೋಗದ ಪರಿಣಾಮದಿಂದಾಗಿ ತುಲಾ ರಾಶಿಯವರಿಗೆ ಆದಾಯ ಹೆಚ್ಚಾಗಲಿದ್ದು, ಆಸ್ತಿ- ವಾಹನ ಖರೀದಿ ಯೋಗವೂ ಇದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ.
ಮಕರ ರಾಶಿ:
ಈ ಸಮಯದಲ್ಲಿ ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ