ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಈ ಮನೆ ಮದ್ದು ಬಳಸಿ ನೋಡಿ ರಾಮಬಾಣದಂತೆ ಕೆಲಸ ಮಾಡುತ್ತದೆ..!
Wednesday, January 25, 2023
ಬೆಲ್ಲ
ಆಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ಬೆಲ್ಲವನ್ನು ಬಳಸಬಹುದು. ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಬೆಲ್ಲದಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಜ್ಜಿಗೆ
ಅಸಿಡಿಟಿ ಸಮಸ್ಯೆಗಳಿಗೆ ಮಜ್ಜಿಗೆ ಪ್ರಯೋಜನಕಾರಿ. ಮಜ್ಜಿಗೆ ಬಳಕೆಯಿಂದ ಹೊಟ್ಟೆ ತಂಪಾಗುತ್ತದೆ. ಅಲ್ಲದೆ, ಇದು ಪ್ರೋಬಯಾಟಿಕ್ಸ್ ಆಹಾರವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಆಹಾರದ ಏರುಪೇರಿನಿಂದ ಆಸಿಡಿಟಿ ಸಮಸ್ಯೆ ಉಂಟಾಗಿದ್ದರೆ ಮಜ್ಜಿಗೆ ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ತುಳಸಿ ಎಲೆ
ತುಳಸಿ ಎಲೆಗಳು ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯೋಜನಕಾರಿಯಾಗಿದೆ. ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವ ಮೂಲಕ ಆಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಇದರಲ್ಲಿರುವ ಗುಣಗಳು ಹೊಟ್ಟೆಯನ್ನು ತಂಪಾಗಿಸುತ್ತದೆ.
ಬಿಸಿ ನೀರು
ಬಿಸಿ ನೀರು ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಯಿಂದ ಹೊರಬರಬಹುದು. ಮಲಗುವ ಮುನ್ನ ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
ಸೋಂಪು ನೀರು
ಸೋಂಪು ನೀರು ಕುಡಿಯುವುದರಿಂದಲೂ ಕೂಡಾ ಆಸಿಡಿಟಿ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಇದಕ್ಕಾಗಿ 1 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ 1 ಚಮಚ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ.