‘ಸಂಸ್ಕೃತ ಎಂದೂ ನಶಿಸದ ಭಾಷೆ’- ಡಾ.ಎಚ್.ಆರ್. ವಿಶ್ವಾಸ
ವಿದ್ಯಾಗಿರಿ: ‘ಸಂಸ್ಕೃತ ಸಾಯುತ್ತಿದೆ ಎಂಬುದು ಸುಳ್ಳು. ಎಲ್ಲ ಭಾಷೆಗಳಲ್ಲಿ ಸಂಸ್ಕೃತÀ ಹಾಸುಹೊಕ್ಕಿದೆ. ಅದು ಎಂದಿಗೂ ನಶಿಸಿ ಹೋಗುವುದಿಲ್ಲ’ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ.ಎಚ್.ಆರ್. ವಿಶ್ವಾಸ ಭರವಸೆ ವ್ಯಕ್ತಪಡಿಸಿದರು.
ಆಳ್ವಾಸ್ ಪದವಿ
ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತದ ಪ್ರಯೋಗ ಸಾಧ್ಯತೆ’ ಎಂಬ ವಿಷಯ
ಕುರಿತು ನಡೆದ ‘ಪ್ರಜ್ಞಾ ಜಿಜ್ಞಾಸ ವೇದಿಹಿಃ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಭಾಷೆಯಲ್ಲೂ ಸಂಸ್ಕೃತ ಇದೆ. ಭಾರತದಲ್ಲಿ ಹಿಂದೆ ಸಂಸ್ಕೃತವನ್ನು ಎಲ್ಲ ಸಮುದಾಯದವರು ಉಪಯೋಗಿಸಿದ್ದು, ಕಾಲಾಂತರದಲ್ಲಿ ಒಂದು ಧರ್ಮದವರು ಅಥವಾ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಯಿತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಅದರ
ಸ್ಥಾನ ಕಡಿಮೆಯಾದರೂ,
ಬಳಕೆ ಹೆಚ್ಚುತ್ತಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಸಂಸ್ಕೃತವನ್ನು ಸಂಸ್ಕೃತದಲ್ಲೇ ಬೋಧಿಸಬೇಕು. ಲಂಡನ್ನ ಜೇಮ್ಸ್ ಶಾಲೆಯಲ್ಲಿ ಎಲ್.ಕೆ.ಜಿ
ಯಿಂದ 7ನೇ ತರಗತಿಯವರೆಗೂ ಸಂಸ್ಕೃತ ಬೋಧನೆ ಇದೆ
ಎಂದರು.
ಸಂಸ್ಕೃತ ಭಾಷೆಯ ಮೇಲೆ ಕೆಲವು ಆಕ್ಷೇಪಗಳಿವೆ. ಸಂಸ್ಕೃತ ಮಾತೃಭಾಷೆಯಾಗಿದೆ ಎಂಬುದನ್ನು ಯಾರೂ
ನಂಬುವುದಿಲ್ಲ. ಆದರೆ, ಇಂತಹ
ನಿದರ್ಶನಗಳಿವೆ. ಸಂಸ್ಕೃತ ಪಂಡಿತರೆ ಸಂಸ್ಕೃತದಲ್ಲಿ ಸಂಭಾಷಣೆ ಮಾಡದೇ ಇದ್ದರೆ, ಸಮಾಜವು ಸಂಸ್ಕೃತ ಮರೆತು ಬಿಡುತ್ತದೆ ಎಂದು
ಹೇಳಿದರು.
ಮಾನವನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯೇ ಮುಳುಗಿದ್ದಾನೆ. ಮಾನವನಂತೆ ಭಾಷೆಗಳ ನಡುವೆಯೂ ಕೊಡುಕೊಳ್ಳುವಿಕೆ ಆಗುತ್ತದೆ. ಸಂಸ್ಕೃತ ಭಾಷೆಯ ಕೊಡುಗೆ ದೊಡ್ಡದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮಾನಂದ ಭಟ್, ಡಾ.ವಿನಾಯಕ ಭಟ್ ಗಾಳಿಮನೆ ಇದ್ದರು. ಡಾ. ವಿನಾಯಕ ಭಟ್
ಸ್ವಾಗತಿಸಿ, ಡಾ.ರಮಾನಂದ ಭಟ್ ವಂದಿಸಿದರು, ಸಿಂಧೂ ಭಟ್ ನಿರೂಪಿಸಿದರು.