-->
ಗ್ರಾಹಕರ ಅರಿವಿಗೆ ಬಾರದಂತೆ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಮಹಿಳಾ ಸಿಬ್ಬಂದಿ ಅರೆಸ್ಟ್ : ಈಕೆಯ ಕರಾಮತ್ತಿಗೆ ದಂಗಾದ ಪೊಲೀಸರು

ಗ್ರಾಹಕರ ಅರಿವಿಗೆ ಬಾರದಂತೆ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಮಹಿಳಾ ಸಿಬ್ಬಂದಿ ಅರೆಸ್ಟ್ : ಈಕೆಯ ಕರಾಮತ್ತಿಗೆ ದಂಗಾದ ಪೊಲೀಸರು


ಬೆಂಗಳೂರು: ಗ್ರಾಹಕರ ಅರಿವಿಗೆ ಬಾರದಂತೆ ಅವರ ಖಾತೆಗೆ ಕನ್ನ ಹಾಕಿ 4.92 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದ ಐಡಿಬಿಐ ಬ್ಯಾಂಕ್‌ನ ರಿಲೇಷನ್‌ಶಿಪ್ ಮಹಿಳಾ ಮ್ಯಾನೇಜರ್ ಅನ್ನು ಸಂಪಂಗಿರಾಮನಗರ ಠಾಣಾ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಚೀಲಾ (34) ಬಂಧಿತೆಯಾಗಿದ್ದಾಳೆ.

ಈಕೆ ಹುಣಸೆಮಾರೇನಹಳ್ಳಿಯ ಭಾರತಿನಗರದಲ್ಲಿ ವಾಸ್ತವ್ಯವಿದ್ದಳು. ಅರೋಪಿತೆ ಗ್ರಾಹಕರ ಅರಿವೆಹೆ ಬಾರದಂತೆ ಅವರ ಖಾತೆಗೆ ಕನ್ನ ಹಾಕಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಎಲ್‌ಐಸಿ ಬಾಂಡ್‌ಗಳನ್ನು ಖರೀದಿಸಿ ವಂಚನೆ ಮಾಡುತ್ತಿದ್ದಳು. ಇದೀಗ ಪೊಲೀಸರು ಆಕೆ ಕೆಲಸ ಮಾಡುತ್ತಿದ್ದ ಮಿಷನ್ ರಸ್ತೆಯ ಐಡಿಬಿಐ ಶಾಖೆಯ ಕಂಪ್ಯೂಟರ್ ಹಾಗೂ 23 ಲಕ್ಷ ರೂ. ಮೊತ್ತದ ಒಂದು ಎಲ್ಐಸಿ ಬಾಂಡ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಮಿಷನ್ ರಸ್ತೆಯ ಐಡಿಬಿಐ ಶಾಖೆಯಲ್ಲಿ ರಿಲೇಶನ್ ಮ್ಯಾನೇಜರ್ ಆಗಿ ಸುಚೀಲಾ 2022ರ ಜೂನ್ 13 ರಿಂದ ಡಿ.31 ರವರೆಗೆ ಕಾರ್ಯನಿರ್ವಹಿಸಿದ್ದಳು.‌ ಈ ಸಂದರ್ಭ ಗ್ರಾಹಕರ ಖಾತೆಗಳಿಂದ ಅವರ ಅರಿವಿಗೆ ಬಾರದಂತೆ ಹಣವನ್ನು ತೆಗೆದು ಅದನ್ನು ಎಲ್‌ಐಸಿ ಬ್ಯಾಂಡ್‌ಗಳಲ್ಲಿ ತೊಡಗಿಸಿ ಸುಮಾರು 1,44,48,649 ರೂ. ವರ್ಗಾವಣೆ ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಗಾಂಧಿನಗರ ಶಾಖೆಯಲ್ಲೂ ಇದೇ ರೀತಿ ವರ್ಗಾವಣೆ ಮಾಡಿದ್ದ ಹಣವನ್ನು ಸರಿದೂಗಿಸಲು 23-12-2022ರಲ್ಲಿ ಒಂದೇ ದಿನ 4.92 ಕೋಟಿ ರೂ., ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article