-->
ಹೊಸ ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟ್ ನಾಯಕ ಬಾಬರ್ ಅಜಮ್: ಖಾಸಗಿ ವೀಡಿಯೋ ವೈರಲ್ ಆಯ್ತಾ?

ಹೊಸ ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟ್ ನಾಯಕ ಬಾಬರ್ ಅಜಮ್: ಖಾಸಗಿ ವೀಡಿಯೋ ವೈರಲ್ ಆಯ್ತಾ?


ನವದೆಹಲಿ: ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಮ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಯುವತಿಯೊಬ್ಬಳೊಂದಿಗೆ ವೀಡಿಯೋ ಕಾಲ್ ಮಾಡುವ ಕೆಲವು ಖಾಸಗಿ ವೀಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿದೆ. ಈ ಮೂಲಕ‌ ಪಾಕ್ ಕ್ರಿಕೆಟ್ ತಂಡದ ನಾಯಕ ಹನಿ ಟ್ರ್ಯಾಪ್‌ ಬಲೆಗೆ ಬಿದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಪಾಕಿಸ್ತಾನ ತಂಡದ ಸಹ ಆಟಗಾರನ ಸ್ನೇಹಿತೆಯೊಂದಿಗೆ ವೀಡಿಯೋ ಚಾಟ್ ಮಾಡಿಕೊಳ್ಳುತ್ತಿರುವುದು ಬಾಬರ್ ಅಜಮ್ ಆಗಿದ್ದು, ಇದು ಅವರದ್ದೇ ಎನ್ನಲಾದ ಕೆಲವು ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಬಾಬರ್ ಅಜಮ್ ನನ್ನೇ ಹೊಲುವ ವ್ಯಕ್ತಿಯೊಬ್ಬ ಯುವತಿಯೊಬ್ಬಳೊಂದಿಗೆ ವಿಡಿಯೋ ಚಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಕಾದ ಭೀತಿಯಲ್ಲಿದ್ದ ಬಾಬರ್​ಗೆ ಖಾಸಗಿ ವಿಡಿಯೋ ವೈರಲ್ ಆಗಿರುವುದು ಮತ್ತಷ್ಟು ಸಂಕಷ್ಟ ತಂದ್ದೊಡ್ಡಿದೆ.

ಈ ವೀಡಿಯೋದಲ್ಲಿರುವ ಯುವತಿ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿ ಎಂದು ಹೇಳಲಾಗುತ್ತಿದೆ. ಆಕೆಯೊಂದಿಗೆ ಬಾಬರ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿ ಚಾಟ್ ಮಾಡುತ್ತಿರುವ ಮತ್ತು ವೀಡಿಯೋ ಕಾಲ್‌ನಲ್ಲಿರುವ ವೀಡಿಯೋ ವೈರಲ್ ಆಗುತ್ತಿದೆ.

@niiravmodi ಖಾತೆಯಿಂದ ಟ್ವಿಟರ್‌ನಲ್ಲಿ ಈ ವೀಡಿಯೊ ಮತ್ತು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ “ನೀವು ಮಾಡಿದ್ದನ್ನು ಮರಳಿ ಪಡೆಯುತ್ತೀರಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಬಾಬರ್ ಆಜಂ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

Ads on article

Advertise in articles 1

advertising articles 2

Advertise under the article