ಫುಟ್ ಪಾತ್ ನಲ್ಲೇ ಶಿಶುವಿಗೆ ಜನ್ಮ ನೀಡಿ ಓಡಿ ಹೋದ ಮಹಾತಾಯಿ...!
Friday, January 20, 2023
ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ತಾಯಿ, ಆಗತಾನೆ ಜನ್ಮ ನೀಡಿರುವ ಶಿಶುವನ್ನು ಫುಟ್ ಪಾತ್ ನಲ್ಲೇ ತೊರೆದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಪರಿಣಾಮ ಇನ್ನೂ ಕಣ್ಣು ಬಿಡದ ಶಿಶು ಮೃತಪಟ್ಟಿದೆ.
ಗುಡಿಬಂಡೆ ಪಟ್ಟಣದ ರಾಮಪಟ್ಟಣ ವೃತ್ತದ ಬಳಿಯ ನಡುರಸ್ತೆಯಲ್ಲಿಯೇ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ತನಗೆ ಮಗು ಬೇಡವೆಂದು ಫುಟ್ಪಾತ್ ನಲ್ಲೇ ತೊರೆದು ನಾಪತ್ತೆಯಾಗಿದ್ದಾಳೆ. ಈ ರೀತಿಯ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿದ್ದು, ಮಗು ಬೇಡವೆಂದು ತ್ಯಜಿಸುವುದು ಈಗ ಸಾಮಾನ್ಯವಾಗಿದೆ.
ಸರಿಯಾದ ಆರೈಕೆ ಸಿಗದೇ, ತಾಯಿಯ ಆಸರೆಯೂ ಇಲ್ಲದ ನವಜಾತ ಶಿಶು ಪುಟ್ ಪಾತ್ ಮೇಲೆಯೇ ಪ್ರಾಣ ಬಿಟ್ಟಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದು ಶಿಶುವಿನ ಮೃತದೇಹವನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.