ವರ್ಕ್ ಔಟ್ ಮಾಡಿ ಮಾತನಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ಮೃತಪಟ್ಟ ಬಾಡಿಬಿಲ್ಡರ್
Wednesday, January 18, 2023
ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಕುಸಿದು ಬಿದ್ದು ಹೃದಯಾಘಾತಕ್ಕೊಂಡು ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಅದೇರೀತಿ ಬಾಡಿಬಿಲ್ಡರ್‌ವೊಬ್ಬರು ಜಿಮ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಚಂಡೀಗಢದ ರಾಮ್ ರಾಣಾ (33) ಎಂಬವರೇ ಸಾವಿಗೀಡಾದ ಬಾಡಿಬಿಲ್ಡರ್. ಇವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಆ ಬಳಿಕ ಸ್ನೇಹಿತರೊಂದಿಗೆ ಮಾತನಾಡುತ್ತ ಹಿಂದಕ್ಕೆ ಬಾಗಿ ಹಾಗೇ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ ವೈದ್ಯರು ಆತ ಅದಾಗಲೇ ಮೃತಪಟ್ಟಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಸಾವಿಗೀಡಾದ 33 ವರ್ಷದ ಬಾಡಿಬಿಲ್ಡರ್ ಪತ್ನಿ, 11 ವರ್ಷ ಮತ್ತು 3 ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ಹೀಗೆ ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಮೊನ್ನೆಮೊನ್ನೆಯಷ್ಟೇ 18 ವರ್ಷದ ಮಾರ್ಷಲ್ ಆರ್ಟ್ ಸ್ಟಾರ್ ಎನಿಸಿಕೊಂಡಿರುವ ಯುವತಿಯೊಬ್ಬಳು ಕೂಡ ಹಠಾತ್ ಸಾವಿಗೀಡಾಗಿದ್ದಳು.