![ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಮೃತ್ಯು ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಮೃತ್ಯು](https://blogger.googleusercontent.com/img/b/R29vZ2xl/AVvXsEjVRgb_TEA756083k4g3r_9pomMRNCn2ZsPz_Sk-O6AixAiyiyxW_pR2MJSH_CmENo6YBvNpzZyXsV0iUnQgf97lkZYihp_gAS6RK-UFBSCwyWFiaeR-z2m2QW-n07bK4BMxd3ExkQmW2gm/s1600/1674061399750860-0.png)
ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಮೃತ್ಯು
Wednesday, January 18, 2023
ಉಪ್ಪಿನಂಗಡಿ: ಟಯರ್ ರಿಸೋಲ್ ಸಂಸ್ಥೆಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಆಲಂಕಾರು ಮೂಲದ ರಾಜೇಶ್ ಪೂಜಾರಿ(43) ಮೃತಪಟ್ಟ ಕಾರ್ಮಿಕ.
ಉಪ್ಪಿನಂಗಡಿ ಗಾಂಧಿಪಾರ್ಕ್ ಬಳಿಯಲ್ಲಿ ಕಾರ್ಯಾಚರಿಸುತ್ತಿದ್ದ ಇಂಡಿಯನ್ ಟಯರ್ ಅಂಗಡಿಯಲ್ಲಿ ಏಕಾಏಕಿ ಏರ್ ಕಂಪ್ರೇಸರ್ ಸ್ಪೋಟಗೊಂಡಿದೆ. ಪರಿಣಾಮ ರಾಜೇಶ್ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.