ದೇಶದ ಗಣರಾಜ್ಯೋತ್ಸವಕ್ಕೆ ಗೂಗಲ್ ಸಂಸ್ಥೆಯ ಡೂಡಲ್ ಗೌರವ
Thursday, January 26, 2023
ಹೊಸದಿಲ್ಲಿ: ಭಾರತ ದೇಶದ 74ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದು, ಗೂಗಲ್ ಸಂಸ್ಥೆ ವಿಶೇಷವಾದ ಡೂಡಲ್ ಪ್ರಕಟಿಸುವ ಮೂಲಕ ಗೌರವವನ್ನು ಸಲ್ಲಿಸಿದೆ.
ದೇಶದ ಗಣರಾಜ್ಯೋತ್ಸವದ ಅಂಗವಾಗಿ ಗುಜರಾತ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ರಚಿಸಿರುವ ಕಾಗದದ ಕಲಾಕೃತಿಯನ್ನು ಗೂಗಲ್ ಹಂಚಿಕೊಂಡು ಗೌರವ ಸಲ್ಲಿಸಿದೆ.
ಗೂಗಲ್ ತನ್ನ ಮುಖಪುಟದಲ್ಲಿ ಹಂಚಿಕೊಂಡಿರುವ ಕಲಾಕೃತಿಯನ್ನು ಕಲಾವಿದ ಪಾರ್ಥ್ ಕೊಥೇಕರ್ ಅವರು ಕೈಗಳಿಂದ ಕತ್ತರಿಸಿದ ಕಾಗಗದಿಂದ ರಚಿಸಿದ್ದಾರೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್ ಪಿಎಫ್ ಕವಾಯತು ತಂಡ ಹಾಗೂ ಮೋಟಾರ್ ಸೈಕಲ್ ಸವಾರರು ಸೇರಿದಂತೆ ಗಣರಾಜ್ಯೋತ್ಸವ ಪರೇಡ್ ಬಿಂಬಿಸುವ ಹಲವು ಅಂಶಗಳನ್ನು ಕಾಣಬಹುದು.