kadaba :-ದಕ್ಷಿಣ ಕನ್ನಡ ವಲಯದ ಮಲಂಕರ ಕ್ಯಾಥೊಲಿಕ್ ಅಸೋಸಿಯೇಷನ್ (ಎಂಸಿಎ)2023-25 ಸಾಲಿನ ಆಡಳಿತ ಕಮಿಟಿ ಅಸ್ತಿತ್ವಕ್ಕೆ..
Tuesday, January 17, 2023
ಕಡಬ
ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ವಲಯದ ಮಲಂಕರ ಕ್ಯಾಥೊಲಿಕ್ ಅಸೋಸಿಯೇಷನ್ (ಎಂಸಿಎ)2023-25 ಸಾಲಿನ ಆಡಳಿತ ಕಮಿಟಿ ಅಸ್ತಿತ್ವಕ್ಕೆ ಬಂದಿದ್ದು,ನೂಜಿಬಾಳ್ತಿಲ ಸಂತ ಮೇರಿಸ್ ಕಥೇಟ್ರಲ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ಚುನಾವಣೆ ನಡೆದಿದೆ.
ದಕ್ಷಿಣ ಕನ್ನಡ ವಲಯದ ಸ್ಪಿರಿಚ್ವಲ್ ಅಡ್ವೈಸರ್ ರೆ.ಫಾ ಕುರಿಯನ್ ಪುಲಿಪ್ಪರ,ಎಂಸಿಎ ಸಭಾತಲ ಸದಸ್ಯ ಯೋಹನ್ನಾನ್ ಒ.ಎಂ ಅವರ ನಿರ್ದೇಶನದಲ್ಲಿ ಎಂಸಿಎ ದಕ್ಷಿಣ ಕನ್ನಡ ವಲಯ ಮಾಜಿ ಅಧ್ಯಕ್ಷ ಜಿಮ್ಸನ್ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
2023-25 ನೇ ಸಾಲಿನ ದಕ್ಷಿಣ ಕನ್ನಡ ವಲಯದ ನಿರ್ದೇಶಕರಾಗಿ ರೆ.ಫಾ ಕುರಿಯನ್ ಪುಲಿಪ್ಪರ, ಅಧ್ಯಕ್ಷರಾಗಿ ಸುಜಿತ್ ಪಿ.ಕೆ,ಉಪಾಧ್ಯಕ್ಷರುಗಳಾಗಿ ಅಜೀಶ್ ನೂಜಿಬಾಳ್ತಿಲ ಮತ್ತು ಎಲ್ಸಿ ಪ್ರಕಾಶ್ ನೆಲ್ಯಾಡಿ, ಮುಖ್ಯ ಕಾರ್ಯದರ್ಶಿಯಾಗಿ ರೋಯ್ ವಿಮಲಗಿರಿ, ಕಾರ್ಯದರ್ಶಿಗಳಾಗಿ ಪ್ರಕಾಶ್ ಕೋಡಿಂಬಾಳ ಮತ್ತು ನೀನಾ ಸಂತೋಷ್ ಕೋಡಿಂಬಾಳ, ಕೋಶಾಧಿಕಾರಿಗಳಾಗಿ ತಂಗಚ್ಚನ್ ಇಚ್ಲಂಪ್ಪಾಡಿ ಆಯ್ಕೆಯಾದರು. ಎಂಸಿಎ ಪುತ್ತೂರು ಧರ್ಮಪ್ರಾಂತ್ಯದ ಪದಾಧಿಕಾರಿಗಳಾಗಿ ಪ್ರಕಾಶ್ ನೆಲ್ಯಾಡಿ, ಪಿ.ಕೆ ಚೆರಿಯನ್, ಅಂಡ್ರೋಸ್ ಪುತ್ತೂರು ಅವರನ್ನು ಅಯ್ಕೆ ಮಾಡಲಾಗಿದೆ.ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.ದಕ್ಷಿಣ ಕನ್ನಡ ವಲಯವನ್ನು ಒಳಗೊಂಡ ವಿವಿಧ ತಾಲೂಕುಗಳ ಸುಮಾರು 17 ಮಲಂಕರ ಕ್ಯಾಥೋಲಿಕ್ ಚರ್ಚ್‌ಗಳಿಂದ ಆಗಮಿಸಿದ ಎಂಸಿಎ ಯೂನಿಟ್ ಪ್ರತಿನಿಧಿಗಳು ಮತದಾನವನ್ನು ಮಾಡಿದರು.