-->

ಎಷ್ಟೇ ಗೊಂದಲಗಳಿದ್ದರೂ ಒಂದೇ ಪಕ್ಷ ಅಧಿಕಾರಕ್ಕೆ, ಎರಡ್ಮೂರು ದೊಡ್ಡ ತಲೆಗಳು ಉರುಳುತ್ತದೆ: ಕೋಡಿಮಠದ ಶ್ರೀಗಳಿಂದ ಭವಿಷ್ಯ

ಎಷ್ಟೇ ಗೊಂದಲಗಳಿದ್ದರೂ ಒಂದೇ ಪಕ್ಷ ಅಧಿಕಾರಕ್ಕೆ, ಎರಡ್ಮೂರು ದೊಡ್ಡ ತಲೆಗಳು ಉರುಳುತ್ತದೆ: ಕೋಡಿಮಠದ ಶ್ರೀಗಳಿಂದ ಭವಿಷ್ಯ


ಹೊಸಪೇಟೆ: ಒಲೆ ಹೊತ್ತಿ ಉರಿದಲ್ಲಿ ನಿಲ್ಲಬಹುದು. ಧರೆಯೇ ಹೊತ್ತಿ ಉರಿದಲ್ಲಿ ನಿಲ್ಲಲಾಗದು. ರಾಜ್ಯ ರಾಜಕೀಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಬಿಜೆಪಿ ನಾಯಕಿ ರಾಣಿ ಸಂಯುಕ್ತ ಮನೆಯಲ್ಲಿ ಶುಕ್ರವಾರ ಪಾದಪೂಜೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಒಲೆ ಹತ್ತಿ ಉರಿದಲ್ಲಿ ನಿಲ್ಲಬಹುದು. ಅದರಿಂದ ಅಡುಗೆಯನ್ನೂ ಮಾಡಬಹುದು. ಆದರೆ, ಧರೆಯೇ ಹೊತ್ತಿ ಉರಿದಲ್ಲಿ ಯಾರಿಗೂ ನಿಲ್ಲಲು ಸಾಧ್ಯವಿಲ್ಲ. 2023ರಲ್ಲಿ ಜಾಗತಿಕವಾಗಿ ಅಂತಹ ಪ್ರಸಂಗ ತಲೆದೋರುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಎರಡು - ಮೂರು ದೊಡ್ಡ ದೊಡ್ಡ ತಲೆಗಳು ಉರುಳಲಿದೆ. ಸಾಧು- ಸಂತರಿಗೆ ತೊಂದರೆಯಾಗುವ ಲಕ್ಷಣಗಳಿವೆ. ಕೊರೊನಾ ಈ ಬಾರಿ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕೆಡಕು ಮಾಡುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದಲಗಳಿದ್ದರೂ, ಈ ಬಾರಿ ಸ್ಪಷ್ಟ ಬಹುಮತದಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

Related Posts

Ads on article

Advertise in articles 1

advertising articles 2

Advertise under the article