ಕಾರು ಅಪಘಾತಗೊಂಡಿದ್ದರಿಂದ ಮನನೊಂದ ಯುವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Monday, January 16, 2023
ಕೊಡಗು: ಕಾರು ಅಪಘಾತಗೊಂಡಿದ್ದರಿಂದ ಮನನೊಂದ ಯುವಕನೋರ್ವನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಗರ್ವಾಲೆ ಗ್ರಾಮದ ಕುಶಾಲಪ್ಪ ಎಂಬವರ ಪುತ್ರ ನಾಪಂಡ ರಾಜೇಶ್ ಚಂಗಪ್ಪ(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಸೋಮವಾರಪೇಟೆ ತಾಲೂಕಿನ ಮೂವತೋಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಜೇಶ್ ಚಂಗಪ್ಪನನ ಕಾರು ಮೊನ್ನೆ ಸಂಜೆ ಅಪಘಾತಕ್ಕೀಡಾಗಿತ್ತು. ಇದರಿಂದ ಮನನೊಂದ ಆತ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಗೆ ಕರೆ ಮಾಡಿದ್ದ. ಬಳಿಕ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮೂವತೋಕು ಗ್ರಾಮದಲ್ಲಿ ಮೃತದೇಹ ಪತ್ತೆಯಾಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.