ಮಂಗಳೂರು: ಹಿಂದುತ್ವ ಪದ ಆರ್ ಎಸ್ ಎಸ್ ಹೆಡ್ ಕ್ವಾಟರ್ ನಲ್ಲಿ ಉದ್ಬವ; ರಣದೀಪ್ ಸಿಂಗ್ ಸುರ್ಜೆವಾಲಾ
Monday, January 23, 2023
ಮಂಗಳೂರು: ಕರಾವಳಿ ಭಾಗದಲ್ಲಿ ಹಿಂದುತ್ವ ಅಮಲನ್ನು ಬಿತ್ತಲಾಗಿದೆ. ಆದರೆ ಉಪನಿಷತ್ , ವೇದ , ಗೀತೆಯಲ್ಲಿ ಯಲ್ಲೂ ಹಿಂದುತ್ವ ಪದದ ಉಲ್ಲೇಖವಿಲ್ಲ. ಈ ಪದ ಆರ್ ಎಸ್ ಎಸ್ ಹೆಡ್ ಕ್ವಾಟರ್ ನಲ್ಲಿ ಉದ್ಬವವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಕಟುವಾಗಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಇತ್ತಿಚಿನ ವರ್ಷಗಳಲ್ಲಿ ಕೋಮು ದ್ವೇಷವನ್ನು ಬಿತ್ತಲಾಗುತ್ತಿದೆ. ಇಂತಹ ಮನಸ್ಥಿತಿಗೆ ಈ ಬಾರಿ ಉತ್ತರ ಕೊಡುವ ಕಾಲ ಬಂದಿದೆ ಎಂದರು.
ಮೋದಿ-ಬೊಮ್ಮಾಯಿ ಸರಕಾರ ಜನಸಾಮಾನ್ಯರ ಮೇಲೆ ದೌರ್ಜನ್ಯವೆಸಗುತ್ತಿದೆ. ನರೇಂದ್ರ ಮೋದಿ ಅಹಂಕಾರದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಬಿಜೆಪಿಯವರ ಆಲೋಚನೆ, ಚಿಂತನೆ ಕ್ರಿಯೆ ಎಲ್ಲವೂ ಅಹಂಕಾರದಿಂದ ಕೂಡಿದೆ. ಚುನಾವಣೆಯ ಸಂದರ್ಭ ಬಿಜೆಪಿ ಮುಖಂಡರು ನೀಡಿರುವ ಯಾವ ಭರವಸೆಯೂ ಈಡೇರಿಸಿಲ್ಲ. ಇಂತಹ ಮೂರ್ಖರು ಇಂದು ಅಧಿಕಾರದಲ್ಲಿದ್ದಾರೆ. ಪ್ರಜಾಧ್ವನಿ ಯಾತ್ರೆಯ ಮೂಲಕ ಈಗ ಬದಲಾವಣೆಯ ಗಾಳಿ ಬೀಸಬೇಕಾಗಿದೆ. ಬಿಜೆಪಿಯನ್ನು ಕಿತ್ತು ಒಗೆಯುವ ಕಾಲ ಬಂದಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.