
Uppinangadi :- ಶೀರಾಡಿಯಲ್ಲಿ ಕಾಡಾನೆ ದಾಳಿ. ತಂದೆ ಸಾವು. ಮಗನಿಗೆ ಗಂಭೀರ ಗಾಯ..!
Sunday, January 1, 2023
ನೆಲ್ಯಾಡಿ
ಉಪ್ಪಿನಂಗಡಿ ಅರಣ್ಯ ಇಲಾಖಾ ವ್ಯಾಪ್ತಿಯ,ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಕಾಡಾನೆ ದಾಳಿಯಲ್ಲಿ ತಂದೆ ಮೃತಪಟ್ಟು ಮಗ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಅರಣ್ಯ ವಲಯದ ಶೀರಾಡಿಯಲ್ಲಿ ನಡೆದಿದೆ.
ತಿಮ್ಮಪ್ಪ(45) ಎಂಬವರು ಮೃತಪಟ್ಟ ವ್ಯಕ್ತಿ. ಇವರ ಮಗ ಶರಣ್ (18)ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೃತ ತಿಮ್ಮಪ್ಪ ಅವರು ಶೀರಾಡಿ ಜನತಾ ಕಾಲೋನಿ ನಿವಾಸಿ ಎನ್ನಲಾಗಿದ್ದು, ಕಾರ್ಯ ನಿಮಿತ ಮಗನ ಜೊತೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 75ರ ಶೀರಾಡಿಯಲ್ಲಿ ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ಸ್ಪೋಟಕ ಬಳಸಿ ಬಂಡೆ ಹೊಡೆಯುತ್ತಿದ್ದು ಈ ಸಮಯದಲ್ಲಿ ಸ್ಫೋಟಕದ ಶಬ್ದಕ್ಕೆ ಬೆದರಿ ಕಾಡಾನೆ ದಾಳಿ ಮಾಡಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ಆಸ್ಪತ್ರೆಗೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.