WINTER SEASON..!!! ಈ ಆಹಾರಗಳನ್ನು ಸೇವಿಸುವುದರಿಂದ ರೋಗಗಳು ನಿಮ್ಮ ಹತ್ತಿರವು ಸುಳಿಯುವುದಿಲ್ಲ!
Tuesday, January 17, 2023
ಎಳ್ಳು ಮತ್ತು ಬೆಲ್ಲ:
ಚಳಿಗಾಲದಲ್ಲಿ ಎಳ್ಳು-ಬೆಲ್ಲವನ್ನು ತಿನ್ನುವುದರಿಂದ ಮಾತು ಸಿಹಿಯಾಗಿರುವುದು ಮಾತ್ರವಲ್ಲ ಆರೋಗ್ಯವೂ ಚೆನ್ನಾಗಿರುತ್ತದೆ.
ಬಜ್ರಾ:
ಸಿರಿಧಾನ್ಯಗಳಲ್ಲಿ ಒಂದಾದ ಬಜ್ರಾ ಸೇವನೆಯೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಇದನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ.
ತುಪ್ಪ:
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ದಪ್ಪಗಾಗುತ್ತೇವೆ ಎಂದು ತುಪ್ಪ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ, ಚಳಿಗಾಲದಲ್ಲಿ ಬಿಸಿ ಆಹಾರದೊಂದಿಗೆ ತುಪ್ಪ ಹಾಕಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಶುಂಠಿ:
ಚಳಿಗಾಲದಲ್ಲಿ ಶುಂಠಿ ಅತ್ಯುತ್ತಮ ಮನೆಮದ್ದು. ಶುಂಠಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.