-->
ಬದುಕಿದ್ದಾಗಲೇ 2ಕೋಟಿ ರೂ. ಎಲ್ಐಸಿ ವಿಮೆಗೆ ತಾಯಿ - ಮಗನ ಮಾಸ್ಟರ್ ಪ್ಲ್ಯಾನ್ : ಅಧಿಕಾರಿಗಳಿಂದ ಬಯಲಾಯ್ತು ಇವರ ಅಸಲಿ ಮುಖ

ಬದುಕಿದ್ದಾಗಲೇ 2ಕೋಟಿ ರೂ. ಎಲ್ಐಸಿ ವಿಮೆಗೆ ತಾಯಿ - ಮಗನ ಮಾಸ್ಟರ್ ಪ್ಲ್ಯಾನ್ : ಅಧಿಕಾರಿಗಳಿಂದ ಬಯಲಾಯ್ತು ಇವರ ಅಸಲಿ ಮುಖ


ಮಹಾರಾಷ್ಟ್ರ: ಮಹಿಳೆಯೊಬ್ಬರು ತಮ್ಮ 29 ವಯಸ್ಸಿನ ಪುತ್ರ ಮೃತಪ್ಟಿದ್ದಾನೆಂದು ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ ರೂ. ವಿಮೆ ಪಡೆಯಲೆತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ದಿನೇಶ್ 2015ರಲ್ಲಿ ಎಲ್‌ಐಸಿ ಪಾಲಿಸಿ ಖರೀದಿಸಿ ಪ್ರೀಮಿಯಂ ಅನ್ನು ಪಾವತಿಸಿದ್ದರು. ಆದರೆ ದಿನೇಶ್ 2016 ಡಿ.25 ರಂದು ಅಹಮದ್ ನಗರ ಜಿಲ್ಲೆಯ ನಗರ ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು 2017 ಮಾರ್ಚ್ 14 ರಂದು ಆತನ ತಾಯಿ ನಂದಾಬಾಯಿ ತಕ್ಸಾಲೆ ಇನ್ನೂರೆನ್ಸ್ ಹಣಕ್ಕೆ ಅರ್ಜಿಸಲ್ಲಿಸಿದ್ದರು.

ವಿಮೆ ಹಣ ಪಡೆಯಲು ನಂದಾಬಾಯಿ ತಮ್ಮ ಪುತ್ರ ದಿನೇಶ್ ಅವರ ವಾರ್ಷಿಕ ಆದಾಯ 8 ಕೋಟಿ ರೂ. ಎಂದು ಅರ್ಜಿಯೊಂದಿಗೆ ಕೆಲ ದಾಖಲೆಗಳನ್ನು ಸಲ್ಲಿಸಿದ್ದರು. ಅಲ್ಲದೆ 38.85 ಲಕ್ಷ ರೂ. ಕೃಷಿ ಆದಾಯ ಮತ್ತು ಹೋಟೆಲ್ ಉದ್ಯಮದಿಂದ 3 ಲಕ್ಷ ರೂ. ಆದಾಯವಿದೆ ಎಂದು ನಾಲ್ಕು ವರ್ಷಗಳ ನಕಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು. ಆದರೆ ಎಲ್‌ಐಸಿ ಅಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲನೆ ನಡೆಸುವ ವೇಳೆ, ನಂದಾಬಾಯಿ ಸಲ್ಲಿಸಿರುವ ದಾಖಲೆಗಳು ಮಾತ್ರವಲ್ಲದೆ ಮರಣ ಪ್ರಮಾಣಪತ್ರ ಸಹ ನಕಲಿ ಎಂಬುದು ಸಾಬೀತಾಗಿದೆ.

ತಾಯಿಯ, ಮಗ ಇಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿ ಪಾರ್ಕ್ ಪೊಲೀಸರು ಅಹಮದ್‌ನಗರ ಮೂಲದ ಮಹಿಳೆ ನಂದಾಬಾಯಿ ಪ್ರಮೋದ ತಕ್ಸಾಲೆ ಮತ್ತು ಆಕೆಯ ಪುತ್ರನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article