ಸೂರ್ಯನ ರಾಶಿ ಪರಿವರ್ತನೆಯಿಂದ ಈ 4 ರಾಶಿಯವರಿಗೆ ಇನ್ನು ಮುಂದೆ ಕಷ್ಟದ ದಿನಗಳು ಆರಂಭ!
Saturday, February 18, 2023
ಕರ್ಕಾಟಕ ರಾಶಿ
ಈ ಅವಧಿಯಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ನಷ್ಟ ಅನುಭವಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಚಿಂತನಶೀಲವಾಗಿ ಕ್ರಮಗಳನ್ನು ತೆಗೆದುಕೊಳ್ಳಿ. ಯಾವುದೇ ಪೂರ್ವಜರ ಆಸ್ತಿಯನ್ನು ಪಡೆಬಹುದು.
ಕನ್ಯಾ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಈ ಅವಧಿಯಲ್ಲಿ ಕನ್ಯಾರಾಶಿಯವರು ತಮ್ಮ ವಿರೋಧಿಗಳಿಂದ ಜಾಗರೂಕರಾಗಿರಬೇಕು. ಅಷ್ಟೇ ಅಲ್ಲ ಈ ಸಮಯದಲ್ಲಿ ಖರ್ಚು ಕೂಡ ಸಾಕಷ್ಟು ಹೆಚ್ಚಾಗಬಹುದು. ಕೆಲವು ವ್ಯಾಪಾರ ಸಂಬಂಧಿತ ಪ್ರಯಾಣ ಮಾಡಬೇಕಾಗಬಹುದು.
ಮಕರ ರಾಶಿ
ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಮಕರ ರಾಶಿಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ನಿಮ್ಮ ಪರಸ್ಪರ ಸಂಬಂಧಗಳು ಕೆಟ್ಟದಾಗಿ ಪರಿಣಾಮ ಬೀರುತ್ತವೆ. ಹಲ್ಲಿನ ಸಮಸ್ಯೆಗಳು ಕಾಡಬಹುದು. ಅದೇ ರೀತಿ ಈ 2 ಗ್ರಹಗಳ ಸಂಯೋಜನೆಯು ಪಾಲುದಾರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕುಂಭ ರಾಶಿ: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ ರಾಶಿಯ ಸ್ಥಳೀಯರು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ಸಂಚಾರದ ಪರಿಣಾಮವು ನಿಮ್ಮ ಆರೋಗ್ಯ ಮತ್ತು ಆಲೋಚನೆಗಳ ಮೇಲೂ ಕಂಡುಬರುತ್ತದೆ. ಈ ಅವಧಿಯಲ್ಲಿ ಶಾರೀರಿಕ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡ ಸಹ ಅನುಭವಿಸಬೇಕಾಗಬಹುದು.