-->
ಪೊಲೀಸ್ ಪೋಷಾಕಿನಲ್ಲಿ ಕಳ್ಳತಕ್ಕಿಳಿದ ಕರ್ನಾಟಕದ ಗ್ಯಾಂಗ್ ಕೇರಳದಲ್ಲಿ ಅರೆಸ್ಟ್

ಪೊಲೀಸ್ ಪೋಷಾಕಿನಲ್ಲಿ ಕಳ್ಳತಕ್ಕಿಳಿದ ಕರ್ನಾಟಕದ ಗ್ಯಾಂಗ್ ಕೇರಳದಲ್ಲಿ ಅರೆಸ್ಟ್


ಕೊಚ್ಚಿ: ಪೊಲೀಸ್ ಪೋಷಾಕು ಧರಿಸಿ ವೃದ್ಧೆಯ 56 ಗ್ರಾಂ 7 ಚಿನ್ನವನನ್ನು ದೋಚಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಕೇರಳ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳು ಕರ್ನಾಟಕದ ಭಟ್ಕಳ ಮೂಲದವರು. ಇನ್ನೂ ಹಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕ ಮೂಲದ ಈ ಖತರ್ನಾಕ್ ಗ್ಯಾಂಗ್ ಕೇರಳವನ್ನೇ ಹೆಚ್ಚು ಕೇಂದ್ರಿಕೃತವಾಗಿಸಿಕೊಂಡು ದರೋಡೆ ನಡೆಸುತ್ತಿತ್ತು. ಇಂತಹ ಅನೇಕ ಅಪರಾಧಗಳನ್ನು ಈ ಗ್ಯಾಂಗ್ ನಡೆಸಿತ್ತು. ತ್ರಿಶ್ಶೂರ್ ಪೊಲೀಸ್ ತಂಡ ಕೊಚ್ಚಿಯಲ್ಲಿ ತಂಡದ ಓರ್ವ ಆರೋಪಿಯನ್ನು ಬಂಧಿಸಿತ್ತು. ಬಳಿಕ ತಂಡದ ಇತರ ಮೂವರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಎಸಿಪಿ ರಾಜಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಜನವರಿ 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ವೇತುವೆಯ ಬಳಿ ಈ ಗ್ಯಾಂಗ್, ವೃದ್ಧೆಯನ್ನು ತಡೆದು ಆಕೆಯ ಒಡವೆ, ವಸ್ತುಗಳನ್ನು ದೋಚಿತ್ತು. ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ವೃದ್ಧೆಯನ್ನು ಹೆದರಿಸಿ ಆಕೆಯ ಬಳಿಯಿದ್ದ 7 ಸವರನ್ ಚಿನ್ನವನ್ನು ದೋಚಿದ್ದರು.

ಸಂತ್ರಸ್ತೆಯ ಪ್ರಕಾರ ಈ ಖತರ್ನಾಕ್ ಗುಂಪಿನ ಖದೀಮರು ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿತ್ತು. ವೃದ್ಧೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ದಾಳಿಕೋರರನ್ನು ಪತ್ತೆ ಹಚ್ಚಿ ಬಂದಿಸಲಾಗಿದೆ. ಇಂತಹ ಹಲವು ಗ್ಯಾಂಗ್‌ಗಳು ನಗರದಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article