ಎಟಿಎಂಗೆ ಹಣ ತುಂಬಿಸಲು ಕಳಿಸಿದರೆ ಕೋಟಿ ರೂ.ನೊಂದಿಗೆ ಪರಾರಿಯಾದ ಭೂಪ
Tuesday, February 7, 2023
ಬೆಂಗಳೂರು: ಎಟಿಎಂ ಮಷೀನ್‌ಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಈತ ಕಳೆದ ಒಂದು ದಶಕದಿಂದ ನಿಯತ್ತಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಇತ್ತೀಚೆಗೊಮ್ಮೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಯಾರ ಕೈಗೂ ಸಿಕ್ಕಿಲ್ಲ. ಸಮಸ್ಯೆ ಏನಾಯಿತೆಂದು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅಸಲಿಯತ್ತು ವಿಚಾರ ಬಹಿರಂಗಗೊಂಡಿದೆ.
ರಾಜೇಶ್ ಮೇಸ್ತಾ ಎಂಬಾತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿ. ಸಂಸ್ಥೆಯ ಉದ್ಯೋಗಿಯಾಗಿದ್ದ. ಈ ಸಂಸ್ಥೆ ಎಟಿಎಂಗಳಿಗೆ ಹಣ ತುಂಬಿಸುವ ಕಾರ್ಯ ಮಾಡುತ್ತಿದೆ. ಕಳೆದ 11 ವರ್ಷದಿಂದ ಇದೇ ಸಂಸ್ಥೆಯಲ್ಲಿ ರಾಜೇಶ್ ಮೇಸ್ತಾ ಕೆಲಸ ಮಾಡುತ್ತಿದ್ದ. ಆದರೆ ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಈತನ ಫೋನ್ ಸ್ವಿಚ್ ಆಪ್ ಆಗಿದೆ. ಹಾಗೂ ಆತ ಎಸ್ಕೆಪ್ ಆಗಿದ್ದ. ಇದರಿಂದ ಅನುಮಾನಗೊಂಡ ಸಂಸ್ಥೆ ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ಮಾಡಿಸಿದೆ. ಆಗ ಈತ 1.30 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವುದು ತಿಳಿದು ಬಂದಿದೆ.
ಸದ್ಯ ಈ ಬಗ್ಗೆ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.