ಯಾವೆಲ್ಲಾ ದಿನ ಮಹಿಳೆಯರು ತಲೆ ಸ್ನಾನ ಮಾಡಿದರೆ ಶ್ರೇಯಸಲ್ಲ ಎಂಬುದು ಇಲ್ಲಿದೆ ನೋಡಿ!
Friday, February 3, 2023
ಮಂಗಳವಾರ : ವಿವಾಹಿತ ಮಹಿಳೆಯರಿಗೆ ಮಂಗಳವಾರವೂ ತಲೆ ಸ್ನಾನ ನಿಷಿದ್ದ. ಈ ದಿನ ಕೂದಲು ತೊಳೆಯುವುದೆಂದರೆ ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ.
ಬುಧವಾರ : ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಹುಡುಗಿಯರು ಅಥವಾ ಪುರುಷರು ಬುಧವಾರ ತಲೆ ಸ್ನಾನ ಮಾಡಬಹುದು. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಗುರುವಾರ : ಗುರುವಾರ ಯಾರೂ ತಲೆಗೆ ಸ್ನಾನ ಮಾಡಲೇಬಾರದು ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಈ ದಿನ ಕೂದಲು ತೊಳೆಯುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಶುಕ್ರವಾರ : ಶುಕ್ರವಾರದಂದು ತಲೆ ಸ್ನಾನ ಮಾಡುವುದು ಅತ್ಯಂತ ಮಂಗಳಕರವಾಗಿದೆ. ಶುಕ್ರವಾರ ತಲೆ ಸ್ನಾನ ಮಾಡುವುದರಿಂದ ಲಕ್ಷ್ಮೀ ದೇವಿ ಮತ್ತು ಮತ್ತು ಶುಕ್ರ ದೇವನ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಶನಿವಾರ : ಶನಿವಾರದಂದು ಕೂಡಾ ಮಹಿಳೆಯರು ಕೂದಲು ತೊಳೆಯಬಾರದು ಎನ್ನುವ ನಂಬಿಕೆ ಇದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಶನಿವಾರದಂದು ಕೂದಲನ್ನು ತೊಳೆಯಲೇಬಾರದು.
ಭಾನುವಾರ : ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನವರು ತಲೆ ಸ್ನಾನಕ್ಕೆ ಮುಂದಾಗುತ್ತಾರೆ. ಆದರೆ ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.