-->
 ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿ. (ದಿ ಕ್ಯಾಂಪ್ಕೊ ಲಿ.): ಒಂದು ಸಂಕ್ಷಿಪ್ತ ಪರಿಚಯ

ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿ. (ದಿ ಕ್ಯಾಂಪ್ಕೊ ಲಿ.): ಒಂದು ಸಂಕ್ಷಿಪ್ತ ಪರಿಚಯ

 ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿ. (ದಿ ಕ್ಯಾಂಪ್ಕೊ ಲಿ.): ಒಂದು ಸಂಕ್ಷಿಪ್ತ ಪರಿಚಯ




ದಿ ಕ್ಯಾಂಪ್ಕೊ ಲಿಮಿಟೆಡ್... ಇದು 1973 ರಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಬಹು ರಾಜ್ಯ ಸಹಕಾರಿ ಸಂಘವಾಗಿದೆ.


ಭಾರತದಾದ್ಯಂತ ವಿಸ್ತಾರವಾದ ಸಂಗ್ರಹಣಾ ಜಾಲ ಮತ್ತು ವ್ಯವಸ್ಥಿತ ಮಾರುಕಟ್ಟೆ ನೆಟ್‌ವರ್ಕ್‌ ಹೆಮ್ಮೆಯ ಸಂಸ್ಥೆ ಕ್ಯಾಂಪ್ಕೊ. ಜನರಿಂದ... ಜನರಿಗಾಗಿ... ಜನರಿಗೋಸ್ಕರ... ಸ್ಥಾಪಿತವಾದ ಮಣ್ಣಿನ ಮಕ್ಕಳ ಸಹಕಾರಿ ಸಂಸ್ಥೆ.


ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಇದೀಗ ಕರಿಮೆಣಸಿನ ವ್ಯವಹಾರಗಳ ಜೊತೆಗೆ ಕೊಕ್ಕೊ ಆಧಾರಿತ ಚಾಕೊಲೇಟ್ ಮತ್ತು ಇತರ ಅರೆ-ಸಿದ್ಧ ಕೊಕ್ಕೊ ಉತ್ಪನ್ನಗಳನ್ನು ತಯಾರಿಸಿ ಕ್ಯಾಂಪ್ಕೋ ಮಾರುಕಟ್ಟೆಗೆ ಪೂರೈಸುತ್ತಿದೆ.


ಕೇವಲ 3576 ರೈತ ಸಮೂಹದ ಸದಸ್ಯತ್ವದೊಂದಿಗೆ ಆರಂಭವಾದ ಕ್ಯಾಂಪ್ಕೊ ಈಗ 1,38,000 ಕ್ಕೂ ಹೆಚ್ಚು ರೈತರ ಸದಸ್ಯತ್ವ ಹೊಂದಿ ಹೆಮ್ಮರವಾಗಿದೆ. ಎಪ್ಪತ್ತರ ದಶಕದಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತ.. ಮತ್ತು ಅದರಿಂದ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ಭಾರೀ ಪ್ರಪಾತದಿಂದ ರೈತರನ್ನು ಮೇಲೆತ್ತಲು ಕೃಷಿ ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆಯನ್ನು ನೀಡುವ ಮೂಲಕ ಬೆಳೆಗಾರರ ಜೀವನದ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಕ್ಯಾಂಪ್ಕೋ ಉಗಮವಾಯಿತು.



ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ವಿಶಿಷ್ಟ ಸಂಯೋಜನೆಯ ಮುಖಾಂತರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯಡಿಯಲ್ಲಿ ಶ್ರೀ ವಾರಣಾಶಿ ಸುಬ್ರಾಯ ಭಟ್ ಅವರ ರೈತೋಪಯೋಗಿ ದೂರದೃಷ್ಠಿತ್ವದಿಂದ ಸ್ಥಾಪಿಸಲಾದ ಕ್ಯಾಂಪ್ಕೊ ಲಿಮಿಟೆಡ್ ರೈತರಿಗೆ ಜೀವನಾಧಾರದ ನೆಲೆ ಒದಗಿಸಿತು ಮತ್ತು ಆ ಕಾಲದಲ್ಲಿ ಅಡಿಕೆ ಮಾರುಕಟ್ಟೆಯ ಉಂಟಾಗಿದ್ದ ಬಿಕ್ಕಟ್ಟನ್ನು ಶಮನಗೊಳಿಸಿತು.



1986ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಂಭವಿಸಿದ ಕುಸಿತದಿಂದಾಗಿ, ಕೊಕ್ಕೊಗೆ ಕೇಳುವವರೇ ಇಲ್ಲದಂತಾಗಿತ್ತು. ಆಗ ಕೊಕ್ಕೊ ಬೆಳೆಗಾರರನ್ನು ಅಪಾಯದಿಂದ ಪಾರು ಮಾಡಲು, ಆಗ್ನೇಯ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಕ್ಯಾಂಪ್ಕೋ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಕೊಕ್ಕೊ ಬೆಳೆಗಾರರ ಸಂಕಷ್ಟಕ್ಕೆ ಮಿಡಿಯಿತು.



ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವರ್ಷಕ್ಕೆ 23,000 ಮೆಟ್ರಿಕ್ ಟನ್ ಉತ್ಪಾದನೆ ನೀಡುತ್ತಿದೆ. ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಖಾನೆಯನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೈಲ್ ಸಿಂಗ್ ಉದ್ಘಾಟಿಸಿದರು. 


ಪರಿಸರ ಸ್ನೇಹಿ ಇಂಧನ ಬಳಕೆಗೋಸ್ಕರ ಕ್ಯಾಂಪ್ಕೊ ಮೂರು ವಿಂಡ್ ಮಿಲ್ ಘಟಕಗಳನ್ನು ಮತ್ತು 500 ಮೆಗಾ ವ್ಯಾಟ್ ಸೌರ ಫಲಕಗಳನ್ನು ಸ್ಥಾಪಿಸಿದೆ. ಫ್ಯಾಕ್ಟರಿಯಲ್ಲಿ ವಿ.ಎ.ಎಂ ಗಳನ್ನು ಕೂಡಾ ಸ್ಥಾಪಿಸಲಾಗಿದೆ.


ಸಮರ್ಥ ಆಡಳಿತಾಧಿಕಾರಿಯಾದ ಶ್ರೀ ಎ. ಕಿಶೋರ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್. ಎಂ. ಕೃಷ್ಣಕುಮಾರ್ ಅವರ ನಾಯಕತ್ವದಲ್ಲಿ ಕ್ಯಾಂಪ್ಕೊ ದೇಶದಾದ್ಯಂತ 160 ಕ್ಕೂ ಹೆಚ್ಚು ಶಾಖೆಗಳನ್ನೂ, 2000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿ ರೂ.2,778 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ಸಮರ್ಥಕವಾಗಿ ನಡೆಸುತ್ತಿದೆ. ಸದಸ್ಯರ ಸಹಕಾರ ಹಾಗೂ ಕ್ರಿಯಾತ್ಮಕ ನಾಯಕತ್ವ ಕ್ಯಾಂಪ್ಕೊದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.


ಬದಲಾಗುತ್ತಿರುವ ಅಡಿಕೆ ಮಾರುಕಟ್ಟೆಯ ಸ್ಥಿತಿ - ಗತಿ, ಮಾರುಕಟ್ಟೆಯ ಏರುಪೇರುಗಳನ್ನು ಸಮರ್ಥವಾಗಿ ಎದುರಿಸಿ ಬೆಳೆಗಾರರ, ಸದಸ್ಯರ ವಿಶ್ವಾಸವನ್ನು ಗಳಿಸಿ ಭವಿಷ್ಯದಲ್ಲಿಯೂ ರೈತರ ಹಿತಾಸಕ್ತಿಯನ್ನು ಕಾಪಾಡುವ ಭರವಸೆ ನೀಡುತ್ತಾ ಸಾಗುತ್ತಿದೆ ಕ್ಯಾಂಪ್ಕೊ.


Ads on article

Advertise in articles 1

advertising articles 2

Advertise under the article