
ಮಂಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಷಾಗೆ ವೀರೇಂದ್ರ ಹೆಗ್ಗಡೆಯವರಿಂದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ
Saturday, February 11, 2023
ಮಂಗಳೂರು: ದ.ಕ.ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿದ್ದು, ಸಂಜೆ ಮಂಗಳೂರಿನಲ್ಲಿ ನಡೆಯುವ ಬಿಜೆಪಿ ಪಕ್ಷದ ಸಭೆಯಲ್ಲಿ ಅವರ ಕೈಸೇರಲಿದೆ.
ಶ್ರೀ ಮಂಜುನಾಥ ಸ್ವಾಮಿಯ ಚಿತ್ರವಿರುವ ಚಿನ್ನಲೇಪಿತ ನಾಣ್ಯದೊಂದಿಗೆ ಬೆಳ್ಳಿ ಬಟ್ಟಲಿನಲ್ಲಿ ಶ್ರೀ ಧರ್ಮಸ್ಥಳದ ಪ್ರಸಾದವನ್ನು ನೀಡಲಾಗಿದೆ. ಸ್ವತಃ ಡಾ.ಡಿ.ವೀರೇಂದ್ರ ಹೆಗ್ಗಡೆಯವರೇ ಈ ಪ್ರಸಾದವನ್ನು ಅಮಿತ್ ಷಾ ಅವರಿಗೆ ನೀಡಿದ್ದಾರೆ. ಸದ್ಯ ಈ ಪ್ರಸಾದವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಜಿ ಸಚಿವ ಈಶ್ವರಪ್ಪನವರಿಗೆ ನೀಡಿದ್ದಾರೆ. ಇಂದು ಸಂಜೆ ಮಂಗಳೂರಿನಲ್ಲಿ ನಡೆಯುವ ಸಭೆಯ ವೇಳೆ ಈ ಪ್ರಸಾದ ಅಮಿತ್ ಶಾ ಅವರ ಕೈ ಸೇರಲಿದೆ.