ಅತಿಯಾಗಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಗುರಿಯಾಗುತ್ತೀರಾ..,!ಎಚ್ಚರ..!
Friday, February 3, 2023
ಪಪ್ಪಾಯಿಯ ಅತಿಯಾಗಿ ತಿಂದರೆ ಅತಿಸಾರ ಸಮಸ್ಯೆ ಉಂಟು ಮಾಡುತ್ತದೆ. ನೀವು ಹೆಚ್ಚು ಪಪ್ಪಾಯಿ ತಿಂದರೆ ಅತಿಸಾರ ಸಮಸ್ಯೆ ಉಂಟಾಗುತ್ತದೆ. ಇದು ಹೆಚ್ಚಿನ ಫೈಬರ್ ಅಂಶದ ಕಾರಣದಿಂದ ಆಗುತ್ತದೆ.
ಪಪ್ಪಾಯಿ ಮಧುಮೇಹ ವಿರೋಧಿ ಗುಣ ಹೊಂದಿದೆ. ಇದು ರಕ್ತದ ಹೆಚ್ಚಿದ ಸಕ್ಕರೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದನ್ನು ಮಧುಮೇಹ ಔಷಧ ಜೊತೆ ತಿಂದರೆ ಕಡಿಮೆ ರಕ್ತದ ಸಕ್ಕರೆ ಸಮಸ್ಯೆಯ ಅಪಾಯ ಉಂಟಾಗುತ್ತದೆ.
ಗರ್ಭಿಣಿಯರಿಗೆ ಪಪ್ಪಾಯಿ ಆರೋಗ್ಯಕರವಲ್ಲ. ಇದರಲ್ಲಿರುವ ಪಾಪೈನ್ ಮತ್ತು ಚೈಮೊಪೈನ್ ಗರ್ಭಾಶಯವನ್ನು ಸಂಕುಚಿತಗೊಳಿಸುತ್ತದೆ. ಇದು ಗರ್ಭಪಾತ, ಅಕಾಲಿಕ ಹೆರಿಗೆ, ಭ್ರೂಣವನ್ನು ಬೆಂಬಲಿಸುವ ಪ್ರಮುಖ ಪೊರೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ.