ಇಂಗುವಿನ ಈ ಜ್ಯೋತಿಷ್ಯ ಪರಿಹಾರಗಳು ನಿಮ್ಮನ್ನು ಈ ಎಲ್ಲಾ ಸಮಸ್ಯೆಯಿಂದ ಮುಕ್ತರನ್ನಾಗಿಸುತ್ತದೆ..!
Monday, February 27, 2023
ಸಾಲಬಾಧೆಯಿಂದ ಮುಕ್ತಿ
ಸಾಲದ ಬಾಧೆಯಿಂದ ತಲೆತಲಾಂತರದವರೆಗೆ ಸಾಲದ ಸುಳಿಗೆ ಸಿಲುಕಿರುವವರು ಇಂಗು ಉಂಡೆಯನ್ನು ನೀರಿನಲ್ಲಿ ಕರಗಿಸಿ ಸ್ನಾನ ಮಾಡುವುದರಿಂದ ಸಾಲಬಾಧೆಯಿನ ಬೇಗ ಮುಕ್ತಿ ಸಿಗುತ್ತದೆ.
ನಕಾರಾತ್ಮಕ ಶಕ್ತಿ ನಾಶಕ
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ, 5 ಗ್ರಾಂ ಇಂಗು, 5 ಗ್ರಾಂ ಕರ್ಪೂರ ಮತ್ತು 5 ಗ್ರಾಂ ಕರಿಮೆಣಸಿನ ಪುಡಿಯನ್ನು ತಯಾರಿಸಿ ಅದರಿಂದ ಸಣ್ಣ ಉಂಡೆಗಳನ್ನು ಮಾಡಿ. ಈಗ ಈ ಉಂಡೆಗಳನ್ನು ಸಮಾನವಾಗಿ ಭಾಗಿಸಿ. ಈ ಉಂಡೆಗಳನ್ನು ಮನೆಯಲ್ಲಿ ಒಂದು ಬೆಳಗ್ಗೆ ಮತ್ತು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸುಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಪ್ರೇತಬಾಧೆಯಿಂದ ಮುಕ್ತಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂಗುವಿನ ಈ ಪರಿಹಾರವು ಮನೆಯಲ್ಲಿ ಯಾವುದೇ ರೀತಿಯ ಭೂತ, ಪ್ರೇತ ಮತ್ತು ಮಾಟ-ಮಂತ್ರವನ್ನು ತಟಸ್ಥಗೊಳಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಇಂಗು ನೀರಿನಿಂದ ಮನೆಯನ್ನು ತೊಳೆಯಿರಿ. ಈ ಪರಿಹಾರವನ್ನು ಹುಣ್ಣಿಮೆಯ ರಾತ್ರಿ ಮಾಡಿದರೆ, ಅದರ ಪರಿಣಾಮವು ಬಹಳ ಬೇಗ ಗೋಚರಿಸುತ್ತದೆ.
ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲು ಈ ಉಪಾಯ ಮಾಡಿ
ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ನೆನೆಗುದಿಗೆ ಬಿದ್ದಿದ್ದರೆ ಅಥವಾ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತಿಲ್ಲ ಎಂದಾದಲ್ಲಿ, ಒಂದು ಚಿಟಿಕೆ ಇಂಗು ತೆಗೆದುಕೊಂಡು ಅದನ್ನು ಉತ್ತರ ದಿಕ್ಕಿಗೆ ಎಸೆಯಿರಿ.