ಪ್ರಾಮಾಣಿಕ, ನಿಷ್ಠೆಯಿಂದಿರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ: ಕಾರ್ಣಿಕ ಭವಿಷ್ಯ ನುಡಿದ ಮೈಲಾರಲಿಂಗ
Tuesday, February 7, 2023
ವಿಜಯನಗರ: ಇಲ್ಲಿನ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಜರುಗಿದೆ. 14 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ, 'ಅಂಬಲಿ ಹಳಸೀತು, ಕಂಬಳಿ ಬೀಸೀತಲೇ ಪರಾಕ್' ಎಂದು ವರ್ಷದ ಕಾರ್ಣಿಕ ಭವಿಷ್ಯ ನುಡಿದಿದೆ.
ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂದು ಭವಿಷ್ಯ ವಾಣಿಯನ್ನು ತಿಳಿಸಿದರು.
ಮಳೆ ಬೆಳೆ ಹೆಚ್ಚಾಗಲಿದೆ, ರೈತರಿಗೆ ಒಳ್ಳೆಯದಾಗುತ್ತದೆ. ಇದರೊಂದಿಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯೂ ಆಗಲಿದೆ ಎಂದು ಗೊರವಯ್ಯ ನುಡಿದ ಕಾರ್ಣಿಕದ ಮಾತನ್ನು ರೈತಾಪಿ ವರ್ಗದ ಮೇಲೆ ವಿಶ್ಲೇಷಣೆ ಮಾಡಲಾಗಿದೆ.
11 ದಿನ ಉಪವಾಸ ವೃತ ಆಚರಣೆಯ ಬಳಿಕ ಇಂದು ಕಾರ್ಣಿಕೋತ್ಸವ ನಡೆದಿದೆ. ಪ್ರತಿ ವರ್ಷವೂ ಮೈಲಾರ ಕ್ಷೇತ್ರದಲ್ಲಿ ನಡೆಯುವ ಪ್ರತೀತಿ ಇದ್ದು ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ನಡೆಯುತ್ತಾ ಬರುತ್ತಿದೆ.