ಮಂಗಳೂರು: ಸ್ಪೋರ್ಟ್ಸ್ ಡೇ ಎಂದು ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು: ಸ್ಪೋರ್ಟ್ಸ್ ಡೇಗೆಂದು ಕಾಲೇಜಿಗೆ ತೆರಳಿರುವ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದೆ.
ನಗರದ ಖಾಸಗಿ ಕಾಲೇಜೊಂದರಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವ ವರ್ಷಿತಾ ಫ್ಲೋರಾ (19) ನಾಪತ್ತೆಯಾದ ವಿದ್ಯಾರ್ಥಿನಿ.
ಮೂಲತಃ ಮೈಸೂರಿನವರಾಗಿರುವ ವರ್ಷಿತಾ ಫ್ಲೋರಾ ಕುಟುಂಬ ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದೆ. ವರ್ಷಿತಾ ಫ್ಲೋರಾ ಫೆ.16ರಂದು ಬೆಳಗ್ಗೆ 7ಕ್ಕೆ ಸ್ಪೋರ್ಟ್ಸ್ ಡೇ ಎಂದು ಮನೆಯಲ್ಲಿ ಹೇಳಿ ಕಾಲೇಜಿಗೆ ಹೋಗಿದ್ದರು. ಆದರೆ ಅಪರಾಹ್ನ 3.30ಕ್ಕೆ ತಾಯಿಗೆ ಕರೆ ಮಾಡಿ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಬಿಳಿ ಮೈಬಣ್ಣ, 5.4 ಅಡಿ ಎತ್ತರ, ದುಂಡು ಮುಖ, ಸಾಧಾರಣ ಶರೀರ, ಉದ್ದ ಕಪ್ಪು ತಲೆಕೂದಲು ಹೊಂದಿದ್ದು ಕಪ್ಪು ಬಣ್ಣದ ಪ್ಯಾಂಟ್, ಬಳಿ ಮತ್ತು ಕಂದು ಬಣ್ಣದ ಗೆರೆಗಳಿರುವ ಟೀ ಶರ್ಟ್ ಧರಿಸಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.