![ಮಂಗಳೂರು: ಮುಸುಕುಧಾರಿಯಿಂದ ಚಿನ್ನಾಭರಣ ಮಳಿಗೆಗೆ ನುಗ್ಗಿ ಸಿಬ್ಬಂದಿಯ ಕೊಲೆ ಮಂಗಳೂರು: ಮುಸುಕುಧಾರಿಯಿಂದ ಚಿನ್ನಾಭರಣ ಮಳಿಗೆಗೆ ನುಗ್ಗಿ ಸಿಬ್ಬಂದಿಯ ಕೊಲೆ](https://blogger.googleusercontent.com/img/b/R29vZ2xl/AVvXsEhNPgbxCvzOE4ADR3WPhY8fBo_UoMYzxBq0p2VDdYQjxOwrTw-lKq2A80hh2TwOBIWsTLaz8M_IMvq1gKO0apkmSranKAt0OahxbtMfIMMwGFfe23QSQL0LbODEZuQIwzSvcxW6H3vzzYhU/s1600/1675427344188602-0.png)
ಮಂಗಳೂರು: ಮುಸುಕುಧಾರಿಯಿಂದ ಚಿನ್ನಾಭರಣ ಮಳಿಗೆಗೆ ನುಗ್ಗಿ ಸಿಬ್ಬಂದಿಯ ಕೊಲೆ
Friday, February 3, 2023
ಮಂಗಳೂರು: ನಗರದ ಚಿನ್ನಾಭರಣ ಮಳಿಗೆಯಲ್ಲಿ ಹಾಡಹಗಲೇ ಚೂರಿಯಿಂದ ಇರಿದು ಸಿಬ್ಬಂದಿಯನ್ನು ಕೊಲೆಗೈದ ಘಟನೆ ನಡೆದಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಸಂಜೆ ವೇಳೆ ನಗರದ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಅತ್ತಾವರ ಮೂಲದ ರಾಘವ ಆಚಾರಿ ಎಂಬವರನ್ನು ಕೊಲೆಗೈದಿದ್ದಾನೆ.
ಚೂರಿ ಇರಿತದಿಂದ ರಾಘವ ಆಚಾರಿ ಗಂಭೀರ ಗಾಯಗೊಂಡಿದ್ದಾರೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಕೃತ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.