ಪುತ್ರನ ಕಾಟದಿಂದ ಬೇಸತ್ತ ತಂದೆಯಿಂದ ನಡೆಯಿತು ಘೋರ ಕೃತ್ಯ
Tuesday, February 28, 2023
ಬೆಳಗಾವಿ: ಪುತ್ರನ ಕಾಟ ತಾಳಲಾರದ ತಂದೆಯೊಬ್ಬ ಆತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ನಡೆದಿದೆ.
ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದ ಯುವಕ. ಆತನ ತಂದೆ ಜಿನ್ನಪ್ಪಾ ಕಾಂಜಿ ಕೊಲೆಗೈದಿರುವ ಆರೋಪಿ.
ಪ್ರಾಥಮಿಕ ಮೂಲಗಳ ಪ್ರಕಾರ ಪುತ್ರನ ಕಾಟ ತಾಳಲಾರದೆ ತಂದೆ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಮದ್ಯಪಾನ ಮಾಡಲು ಹಣ ಕೊಡುವಂತೆ ಪುತ್ರ ಭರತೇಶ ನಿತ್ಯವೂ ಆತನ ತಂದೆಯನ್ನು ಪೀಡಿಸುತ್ತಿದ್ದ. ಆತನ ಉಪಟಳ ತಾಳಲಾರದೆ ತಂದೆ ಹರಿತವಾದ ಆಯುಧದಿಂದ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ತಂದೆ ಬೀಸಿರುವ ಮಾರಕಾಸ್ತ್ರದಿಂದ ಪುತ್ರ ಸ್ಥಳದಲ್ಲೇ ಶವವಾಗಿ ಬಿದ್ದಿದ್ದಾನೆ. ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾನೆ.