-->
ಪೆಟ್ ಶಾಪ್‌ನಲ್ಲಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು: ವೀಡಿಯೋ ವೈರಲ್

ಪೆಟ್ ಶಾಪ್‌ನಲ್ಲಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು: ವೀಡಿಯೋ ವೈರಲ್



ಕೊಚ್ಚಿ: ಓದಿನತ್ತ ಗಮನ ಹರಿಸಬೇಕಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ನಾಯಿ ಮರಿಯನ್ನು ಕಳವು ಮಾಡಿರುವ ಪ್ರಕರಣದಲ್ಲಿ ಬಂಧಿಯಾಗಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

 ನಿಖಿಲ್ ಹಾಗೂ ಶ್ರೇಯಾ ಬಂಧಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಆರೋಪಿಗಳಿಬ್ಬರನ್ನು ಕೇರಳದ ಪನಂಗದ ಠಾಣೆಯ ಪೊಲೀಸರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಬಂಧಿಸಿದ್ದಾರೆ. ಈ ವಿದ್ಯಾರ್ಥಿಗಳಿಂದ  20 ಸಾವಿರ ರೂ. ಮೌಲ್ಯದ 45 ದಿನದ ನಾಯಿಮರಿಯನ್ನು ವಶಕ್ಕೆ ಪಡೆಯಲಾಗಿದೆ.

ನಿಖಿಲ್ ಮತ್ತು ಶ್ರೇಯಾ ಕೇರಳದ ನೆಟ್ಟೂರಿನ ಪೆಟ್ ಮಳಿಗೆಯಿಂದ ನಾಯಿ ಮರಿಯನ್ನು ಕದ್ದಿದ್ದರು. ಈ ಘಟನೆ ಜ.28 ರಂದು ಸಂಜೆ 7 ಗಂಟೆಗೆ ನಡೆದಿತ್ತು. ಇವರು ಬೆಕ್ಕಿನ ಮರಿ ಖರೀದಿಸಲೆಂದು ಪೆಟ್ ಶಾಪ್‌ಗೆ ತೆರಳಿದ್ದರು. ಬಳಿಕ ಅಂಗಡಿ ಮಾಲೀಕನ ಗಮನ ಬೇರೆಡೆಗೆ ಹೋದ ವೇಳೆ ಪಂಜರದಲ್ಲಿದ್ದ ನಾಯಿ ಮರಿಯನ್ನು ಎತ್ತಿಕೊಂಡು ಹೆಲ್ಮಟ್ ಒಳಗೆ ಹಾಕಿಕೊಂಡು ಹೋಗಿದ್ದಾರೆ. ಮೂರು ಸ್ಪಿಟ್ಸ್ ನಾಯಿಮರಿಗಳಲ್ಲಿ ಒಂದನ್ನು ಕದ್ದಿದ್ದಾರೆ. 

ಅಲಪ್ಪುಳ ಮೂಲದವ ವ್ಯಕ್ತಿಯೊಬ್ಬರ ಬೇಡಿಕೆಯಂತೆ ಈ ಸ್ಪಿಟ್ಸ್ ನಾಯಿಮರಿಗಳನ್ನು ತರಲಾಗಿತ್ತು. ಆ ವ್ಯಕ್ತಿ ನಾಯಿಮರಿಗಾಗಿ ಬಂದ ವೇಳೆ ಅಂಗಡಿಯ ಮಾಲೀಕರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ನಾಯಿಮರಿ ಸ್ಥಳದಿಂದ ಓಡಿಹೋಗಿರಬಹುದು ಎಂದು ಅವರು ಮೊದಲು ಭಾವಿಸಿದ್ದರು. ಆದರೆ, ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article