![ಮಂಗಳೂರು: ಜ್ಯುವೆಲ್ಲರಿ ಮರ್ಡರ್ ಕೇಸ್: ಆರೋಪಿ ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಸಹಕಾರ ಕೋರಿದ ಪೊಲೀಸರು ಮಂಗಳೂರು: ಜ್ಯುವೆಲ್ಲರಿ ಮರ್ಡರ್ ಕೇಸ್: ಆರೋಪಿ ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಸಹಕಾರ ಕೋರಿದ ಪೊಲೀಸರು](https://blogger.googleusercontent.com/img/b/R29vZ2xl/AVvXsEj9zu_p51wYaBuwpv5eaCuB_rh2XpHkq5sHe-01txKwkzJ1SBMQdpkzlpy9WWwqA4pCMMIKoNjyiL7E78s-niXSGqps4TNtz-DseJJ0owyEIPzo8ovjTTCA4FnVZA3cYoENJGNB5kcW__wO/s1600/1675670747669398-0.png)
ಮಂಗಳೂರು: ಜ್ಯುವೆಲ್ಲರಿ ಮರ್ಡರ್ ಕೇಸ್: ಆರೋಪಿ ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಸಹಕಾರ ಕೋರಿದ ಪೊಲೀಸರು
Monday, February 6, 2023
ಮಂಗಳೂರು: ನಗರದ ಬಲ್ಮಠ ರೋಡ್ ನ ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿಯನ್ನು ಹಾಡಹಗಲೇ ಕೊಲೆಗೈದು ಪರಾರಿಯಾಗಿರುವ ಶಂಕಿತ ಆರೋಪಿಯ ಪತ್ತೆ ಆರೋಪಿಯ ಸಿಸಿ ಕ್ಯಾಮರಾ ಚಿತ್ರವನ್ನು ಪೊಲೀಸರು ರಿಲೀಸ್ ಮಾಡಿ, ಪತ್ತೆಗೆ ಸಾರ್ವಜನಿಕರಲ್ಲಿ ಸಹಕಾರ ಕೋರಿದ್ದಾರೆ.
ಫೆ.3ರಂದು ಮಧ್ಯಾಹ್ನ 3.30 ರಿಂದ 3.45 ರ ನಡುವೆ ಮಂಗಳೂರು ಜ್ಯುವೆಲರ್ಸ್‌ಗೆ ಚಿನ್ನ ಖರೀದಿಸುವ ನೆಪದಲ್ಲಿ ಆರೋಪಿ ಬಂದಿದ್ದ. ಆ ಬಳಿಕ ಜ್ಯುವೆಲ್ಲರಿಯಲ್ಲಿ ಒಬ್ಬರೇ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ನನ್ನು ಚಾಕುವಿನಿಂದ ಇರಿದು ಕೊಲೆಗೈದು ಅಲ್ಲಿಂದ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ. ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಹಂತಕನ ಭಾವಚಿತ್ರ ಪತ್ತೆಯಾಗಿತ್ತು.
ಇದೀಗ ಆರೋಪಿಯ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸರು ಸಿಸಿ ಕ್ಯಾಮರಾ ದೃಶ್ಯವಳಿಯಲ್ಲಿ ಕ್ಯಾಪ್ಚರ್ ಆಗಿರುವ ಆತನ ಫೋಟೊ ರಿಲೀಸ್ ಮಾಡಿದ್ದಾರೆ. ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಸಿಪಿ ಸಿಸಿಬಿ, ಮಂಗಳೂರು ನಗರ - ಪಿ.ಎ.ಹೆಗ್ಡೆ 9945054333, ಎಸಿಪಿ ಕೇಂದ್ರ ಉಪ ವಿಭಾಗ, ಮಂಗಳೂರು ನಗರ - ಮಹೇಶ್ ಕುಮಾರ್ -9480805320 ಅವರ ಮೊಬೈಲ್ ಫೋನ್ ಗೆ ತಿಳಿಸಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.